ಮಳೆಗಾದಲ್ಲಿ ಬೆಂಡೆ ಬೆಳೆಯಲ್ಲಿ ಹಳದಿ ನಂಜು ರೋಗ ಕಾಣಿಸಿಕೊಳ್ಳಲಾರಂಭಿಸಿದೆ. ಇಂಥ ಸಂದರ್ಭದಲ್ಲಿ ಬೆಂಡೆ ಬೆಳೆಯಲ್ಲಿನ ರೋಗವನ್ನು ಸಮರ್ಥವಾಗಿ ನಿರ್ವಹಿಸಲು ಔಷದೋಪಚಾರಗಳ ಬಗ್ಗೆ ತೋಟಗಾರಿಕೆ ಸೂಚನೆ ನೀಡಿದೆ.

ಬೆಂಡೆಯಲ್ಲಿ ಹಳದಿ ನಂಜು ರೋಗ ಬಿಳಿ ನೊಣದಿಂದ ಹರಡುತ್ತದೆ. ಇದು ಒಂದು ವೈರಸ್ ರೋಗವಾಗಿದೆ. ಆರಂಭದಲ್ಲಿ ಸೋಂಕಿತ ಎಲೆಗಳು ಹಳದಿ ನಾಳಗಳನ್ನು ಮಾತ್ರ ತೋರಿಸುತ್ತದೆ.

ನಂತರದ ಹಂತಗಳಲ್ಲಿ ಸಂಪೂರ್ಣ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಟಾರ್ಪಾಲಿನ (ತಾಡಪತ್ರಿ)ಗಾಗಿ ರೈತರಿಂದ ಅರ್ಜಿ ಆಹ್ವಾನ

ನಿರ್ವಹಣೆ ಕ್ರಮಗಳು:
ಆರಂಭಿಕ ಹಂತಗಳಲ್ಲಿ ರೋಗಭಾಧಿತ ಗಿಡಗಳನ್ನು ಕಿತ್ತು ಸುಡಬೇಕು. ಹಳದಿ ನಂಜು ರೋಗ ಹರಡುವ ಕೀಟಗಳ ನಿಯಂತ್ರಣಕ್ಕಾಗಿ 1.5 ಮಿ.ಲೀ. ಟ್ರೈಜೋಫಾಸ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.

ಇದನ್ನೂ ಓದಿ: ತೋಟ ಆರಂಭಿಸಲು ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ

ಸಾವಯವವಾಗಿ ನಿಯಂತ್ರಣ ಮಾಡಲು 5 ಮಿ.ಲೀ. ಬೇವಿನ ಎಣ್ಣೆ +1/2 ಪ್ಯಾಕೇಟ್ ಶ್ಯಾಂಪು ಅಥವಾ ಸೋಪ್ ನೀರನ್ನು ಒಂದು ಲೀಟರ್ ನೀರಿಗೆ ಹಾಕಿ ಗಿಡಗಳಿಗೆ ಸಿಂಪಡಣೆ ಮಾಡುವುದರಿಂದ ಹಳದಿ ವೈರಸ್ ರೋಗವನ್ನು ನಿಯಂತ್ರಿಸಬಹುದು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ವಿಷಯ ತಜ್ಞ ರಿಶಲ್ ಡಿಸೋಜ ಅಥವಾ ದೂರವಾಣಿ ಸಂಖ್ಯೆ: 8277806372 ಸಂಪರ್ಕಿಸಬಹುದು.

ಇದನ್ನೂ ಓದಿ: ಮಾವು ಬೆಳೆಯಲ್ಲಿ ಇಸ್ರೇಲ್ ತಂತ್ರಜ್ಞಾನ; ಭರ್ಜರಿ ಆದಾಯ

ರೋಗ ನಿರೋದಕ ತಳಿಗಳು:
ಕೃಷಿ ವಿಜ್ಞಾನ ಸಂಸ್ಥೆಗಳು ಕೆಲ ರೋಗ ನಿರೋಧಕ ಶಕ್ತಿಯುಳ್ಳ ತಳಿಗಳನ್ನು ಪರಿಚಯಿಸಿವೆ. ಅವುಗಳೆಂದರೆ…

ಪೂಸಾ ಸವಾನಿ: ಈ ತಳಿಯು ಹಳದಿ ನಂಜು ರೋಗವನ್ನು ಸ್ವಲ್ಪ ಮಟ್ಟಿಗೆ ವಿರೋಧಿಸುವ ನಿರೋಧಕ ಶಕ್ತಿ ಹೊಂದಿದೆ. ಇದನ್ನು ಎಲ್ಲ ವಲಯಗಳಿಗೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ಅಧಿಕ ಮಳೆಯಿಂದ ಉದ್ದು-ಹೆಸರು ಸಸ್ಯ ಸಂರಕ್ಷಣಾ ಕ್ರಮಗಳು

ಅರ್ಕಾ ಅಭಯ್: ಒಂದು ಹೆಕ್ಟೇರ್ ಗೆ 18 ಟನ್ ವರೆಗೆ ಇಳುವರಿ ಪಡೆಯಬಹುದು. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಇದು ಹಳದಿ ನಂಜು ರೋಗ ತಡೆದುಕೊಳ್ಳುವ ಶಕ್ತಿ ಹೊಂದಿದೆ.

ಇದರ ಗಿಡಗಳು ಎತ್ತವಾಗಿ ಬೆಳೆಯುತ್ತವೆ. ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು ಉದ್ದವಾಗಿ ಮೃದುವಾಗಿರುತ್ತವೆ. ಕಾಯಿಗಳು ಶೇಖರಣಾ ಮತ್ತು ಅಡುಗೆ ಗುಣ ಹೊಂದಿವೆ.

ಇದನ್ನೂ ಓದಿ: ರೇಷ್ಮೆಗೆ ಬಂಗಾರದ ಬೆಲೆ: ತಜ್ಞರ ಭವಿಷ್ಯ

ಅರ್ಕಾ ಅನಾಮಿಕಾ: ಒಂದು ಹೆಕ್ಟೇರ್ ಗೆ 20 ಟನ್ ವರೆಗೆ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಇದೂ ಸಹ ಹಳದಿ ನಂಜು ರೋಗ ನಿರೋಧಕ ಶಕ್ತಿ ಹೊಂದಿದೆ.

ವೈಟ್ ವೆಲ್ವೆಟ್ (ಹಾಲು ಬೆಂಡೆ): ಇದು ಸ್ಥಳೀಯ ತಳಿಯಾಗಿದ್ದು, ರಾಜ್ಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯ ಯೋಜನೆಗಳ ಕಿರು ಪರಿಚಯ