
ಸೈಬರ್ ಸೆಕ್ಯುರಿಟಿಯಲ್ಲಿ 67 ಸಾವಿರ ಉದ್ಯೋಗ

ಡಿಜಿಟಲ್ ಮತ್ತು ಸೈಬರ್ ಡೇಟಾ ಸೆಕ್ಯುರಿಟಿಯಲ್ಲಿ ವ್ಯಾಪಕ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಇಂಟರ್‍ನೆಟ್ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿರುವುದರ ಜೊತೆಗೆ ಸೈಬರ್ ಸೆಕ್ಯುರಿಟಿ ತಜ್ಞರಿಗೆ ಬೇಡಿಕೆಯೂ ಹೆಚ್ಚುತ್ತಿದೆ ಎಂದು ಸ್ಟಾಫಿಂಗ್ ಕಂಪನಿ ಎಕ್ಸ್‍ಫೆನೊ ತಿಳಿಸಿದೆ.
ಅದರ ವರದಿಯಂತೆ ದೇಶದಲ್ಲಿ ಡಿಜಿಟಲ್ ಮತ್ತು ಸೈಬರ್ ಡೇಟಾ ಸೆಕ್ಯುರಿಟಿ ವಲಯದಲ್ಲಿ 67 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಒಂದರಲ್ಲೇ 19 ಸಾವಿರ ಹುದ್ದೆಗಳು ಲಭ್ಯವಿದೆ ಎಂದಿದೆ.
ಪ್ರಮುಖ ಕಂಪನಿಗಳು:
ಅಮೆಜಾನ್, ಪೇಟಿಎಂ, ವಾಲ್‍ಮಾರ್ಟ್, ಡೆಲೊಯಿಟ್, ಕೆಪಿಎಂಜಿ, ಇವೈ, ಪಿಡಬ್ಲ್ಯುಸಿ, ಶೆಲ್, ವೆಲ್ಸ್ ಫಾರ್ಗೊ, ಸಿಸ್ಕೊ, ಅಕ್ಸೆಂಚರ್, ಕ್ಯಾಪ್‍ಜೆಮಿನಿ, ಎರಿಕ್‍ಸನ್, ಯಾಕೊಹಮ, ಪಲ್ಲಡಿಯನ್ ನೆಟ್‍ವಕ್ರ್ಸ್, ಅಡೋಬ್, ಇನ್ಫೋಸಿಸ್ ಸೇರಿದಂತೆ ಹಲವಾರು ಕಂಪನಿಗಳು ಡೇಟಾ ಭದ್ರತೆಗೆ ಸೈಬರ್ ಸೆಕ್ಯುರಿಟಿ ತಜ್ಞರನ್ನು ನೇಮಕ ಮಾಡಿಕೊಳ್ಳಲಿವೆ.
ಯಾವ ಹುದ್ದೆಗಳು:
ಅಪ್ಲಿಕೇಶನ್ ಸೆಕ್ಯುರಿಟಿ, ಥ್ರೆಟ್ ಮ್ಯಾನೇಜ್ ಮೆಂಟ್, ಕ್ಲೌಡ್ ಸೆಕ್ಯುರಿಟಿ, ಇನ್ ಫಾರ್ಮೇಶನ್ ಸೆಕ್ಯುರಿಟಿ, ಕಂಪ್ಲೈಯನ್ಸ್ ಸೆಕ್ಯುರಿಟಿ, ನೆಟ್‍ವರ್ಕ್ ಸೆಕ್ಯುರಿಟಿ, ಇತ್ಯಾದಿ ಹುದ್ದೆಗಳಲ್ಲಿ ಅವಕಾಶಗಳು ಇವೆ ಎಂದು ಕಂಪನಿಯ ವರದಿ ತಿಳಿಸಿದೆ.
ಡಿಜಿಟಲ್ ಮತ್ತು ಸೈಬರ್ ಡೇಟಾ ಸ್ವತ್ತುಗಳ ಮೇಲ್ವಿಚಾರಣೆಗೆ ಬಹುತೇಕ ಕಂಪನಿಗಳು ಸೈಬರ್ ಭದ್ರತಾ ತಜ್ಞರನ್ನು ನೇಮಿಸಿಕೊಳ್ಳುತ್ತಿವೆ. ನೆಟ್‍ವರ್ಕ್, ಇನ್‍ಫ್ರಾಸ್ಟ್ರಕ್ಚರ್, ಅಫ್ಲಿಕೇಷನ್, ಡೇಟಾ ಮತ್ತು ಇನ್ ಫಾರ್ಮೇಶನ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಸೈಬರ್ ಭದ್ರತೆ ಅಗತ್ಯವಾಗಿದೆ ಎಂದು ವರದಿ ತಿಳಿಸಿದೆ. ಈ ಕಾರಣಕ್ಕಾಗಿ ಬೇಡಿಕೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಜೊತೆಗೆ ದೊಡ್ಡ ಎಂಎನ್‍ಸಿ ಕಂಪನಿಗಳು ಡಿಜಿಟಲ್ ಬ್ಯಾಕ್ ಆಫೀಸಸ್ ಮತ್ತು ಜಿಐಎಸ್ ಕೇಂದ್ರಗಳನ್ನು ನಿರ್ಮಿಸುತ್ತಿವೆ. ಇದು ಕೂಡ ಸೈಬರ್ ಪ್ರತಿಭಾವಂತರಿಗೆ ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣ ಎಂದು ವರದಿ ಹೇಳಿದೆ.