ಸರಳವಾಗಿ ಬದುಕಿ ಎದ್ದು ಹೋದ ಶತಮಾನದ ಸಂತರಿಗೆ ಅಕ್ಷರ ನಮನ…

ಹೆಣ್ಣ ನೋಡಲಿಲ್ಲlಹೊನ್ನ ಮುಟ್ಟಲಿಲ್ಲlಮಣ್ಣ ಕೊಳ್ಳಲಿಲ್ಲ lಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ lಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ lಹಾಲು ಕುಡಿಯಲಿಲ್ಲlಹಣ್ಣು ತಿನ್ನಲಿಲ್ಲ l
ಹುಳಿ ಉಪ್ಪು, ಖಾರ ಮುಟ್ಟಲಿಲ್ಲ lಪಲ್ಲಕ್ಕಿ ಹತ್ತಿ ಯಾರ ಹೆಗಲ ನೋವ ಮಾಡಲಿಲ್ಲ lತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರವಾಗಲಿಲ್ಲ lತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ ಕೊಚ್ಚಿಕೊಳ್ಳಲಿಲ್ಲ lಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ lಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ l
ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ lಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದ ಬಿಡಲಿಲ್ಲlಯಾವ ಪದವಿ ಬೇಡಲಿಲ್ಲಯಾರ ಹಂಗಿನೊಳು ಬದುಕಲಿಲ್ಲ lಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು ಕಲ್ಯಾಣ ಬಿಡಲಿಲ್ಲ lಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲl ಸದಾ ಶಾಂತಿ ಬಿಡಲಿಲ್ಲ lಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ l
ಇಸ್ತ್ರಿ ಬಟ್ಟೆ ಹಾಕಲಿಲ್ಲ… ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ lಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ ತನ್ನದಯಾವುದು ಮಾಡಿಕೊಳ್ಳಲಿಲ್ಲlತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ ಎಂದ ನಮ್ಮ ಆರೂಢ ಕಂದ…
ಹೀಗೆ ಅದೆಷ್ಟೋ ಭಕ್ತರು ಶ್ರೀಗಳ ಸರಳತೆಯನ್ನು ಹಾಡಿ ಹೊಗಳುತ್ತಿದ್ದಾರೆ.
