Select Page

ಸಂಕ್ರಾಂತಿಲಿ ಸೀರೆಯುಟ್ಟು ‘ನಕ್ಷತ್ರ’ದಂತೆ ಮಿಂಚಿದ ಲೀಲಾ

ಸಂಕ್ರಾಂತಿಲಿ ಸೀರೆಯುಟ್ಟು ‘ನಕ್ಷತ್ರ’ದಂತೆ ಮಿಂಚಿದ ಲೀಲಾ

‘ಕೃಷ್ಣ ಲೀಲಾ’ ಸಿನಿಮಾ ಖ್ಯಾತಿಯ ನಟಿ ಮಯೂರಿ ಕ್ಯಾತರಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಮಯೂರಿ ಕ್ಯಾತರಿ, ಆಗಾಗಾ ಹೊಸ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಸ್ಯಾಂಡಲ್ ವುಡ್ ನಲ್ಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ ನಟಿ ಮಯೂರಿ, ಕೃಷ್ಣ ಲೀಲಾ, ಇಷ್ಟಕಾಮ್ಯ ಹಾಗೂ ನಟರಾಜ ಸರ್ವಿಸ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಸೀಜನ್ 9ರಲ್ಲಿ ಭಾಗವಹಿಸಿದ್ದರು.

ಸಿನಿಮಾಗೆ ಎಂಟ್ರಿ ಕೊಡುವ ಮೊದಲು ಇವರಿಗೆ ಬಹಳಷ್ಟು ಜನಪ್ರೀಯತೆ ತಂದು ಕೊಟ್ಟಿದ್ದು, ಅಶ್ವೀನಿ ನಕ್ಷತ್ರ ಧಾರಾವಾಹಿ. ಹೌದು ಅಶ್ವೀನಿ ನಕ್ಷತ್ರ ಧಾರಾವಾಹಿ ಆದಮೇಲೆ ಮಯೂರಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರು.

ಇದೀಗ ಈ ವರ್ಷದ ಸಂಕ್ರಾಂತಿ ಹಬ್ಬವನ್ನು ಬಹಳ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಸಖತ್ ರೆಡಿಯಾಗಿ ‘ನವಿಲಿ’ನಂತೆ ಕಾಣುತ್ತಿರೋ ಮಯೂರಿ, ‌ಕೈಯಲ್ಲಿ ಕಬ್ಬು, ಅಚ್ಚು ಬೆಲ್ಲ, ಗೆಣಸು, ಬಾದಾಮಿ, ಕುಸುರೆಳ್ಳು ಸೇರಿದಂತೆ ಸಂಕ್ರಾಂತಿಯ ವಿಶೇಷ ತಿನಿಸುಗಳಿಂದ ತುಂಬಿದ ತಟ್ಟೆ ಹಿಡಿದು ಫುಲ್ ಮಿಂಚುತ್ತಿದ್ದಾರೆ.

ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸುಖ-ಶಾಂತಿ, ಸಂತೋಷ ಹಾಗೂ ಸಮೃದ್ಧಿ ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ. ಸುಗ್ಗಿ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://www.instagram.com/reel/CnbEOXTIzTQ/?igshid=YmMyMTA2M2Y=

Leave a reply

Your email address will not be published. Required fields are marked *