‘ಕಾಂತಾರ-2’ ಸಿನಿಮಾದ ಮಾಹಿತಿ ನೀಡಿದ ವಿಜಯ ಕಿರಗಂದೂರು: ಇದು ಸಿಕ್ವೇಲ್ ಅಲ್ಲ..!

‘ಕಾಂತಾರ-2’ ಸಿನಿಮಾದ ಮಾಹಿತಿ ನೀಡಿದ ವಿಜಯ ಕಿರಗಂದೂರು: ಇದು ಸಿಕ್ವೇಲ್ ಅಲ್ಲ..!

ಕಳೆದ ವರ್ಷ ತೆರೆಕಂಡು ಇಡೀ ಭಾರತ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ, ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಂತೆ ಮಾಡಿದ ಚಿತ್ರ ಕಾಂತಾರ.

ಈ ಸಿನಿಮಾದ 2ನೇ ಭಾಗ ತೆರೆಮೇಲೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ. ಅಧಿಕೃತ ಮಾಹಿತಿ ಇಲ್ಲದಿದ್ದರು ಸಹ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಪ್ರತಿ ಸಲವೂ ವಿಭಿನ್ನ ಕಥೆ ಮಾಡುವ ರಿಷಬ್ ಶೆಟ್ಟಿ ಕಾಂತಾರ-2 ಚಿತ್ರದಲ್ಲಿ ಯಾವ ರೀತಿಯ ಚಿತ್ರಕಥೆ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಇನ್ನು ಕಾಂತಾರ-2 ಬರಲಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನಟ ದಿಗಂತ್ ರಿಷಬ್ ಶೆಟ್ಟಿ ಕಾಂತಾರ-2 ಕಥೆ ರಚಿಸುವಲ್ಲಿ ನಿರತರಾಗಿದ್ದಾರೆ ಎಂಬ ಹೇಳಿದ್ದರು. ದಿಗಂತ್ ನೀಡಿದ್ದ ಈ ಹೇಳಿಕೆ ಕಾಂತಾರ 2ನೇ ಭಾಗ ಬರುವುದನ್ನು ಬಹುತೇಕ ಖಚಿತಪಡಿಸಿತು.

ಹೀಗೆ ಕಾಂತಾರ-2 ಕುರಿತ ಚರ್ಚೆ ಜೋರಾಗಿರುವಾಗಲೇ ಚಿತ್ರತಂಡ ಕಾಂತಾರ-2 ಸಿನಿಮಾ ಮಾಡಲು ದೈವದ ಅನುಮತಿ ಕೇಳಿತ್ತು. ದೈವ ಒಪ್ಪಿಗೆಯನ್ನು ಸೂಚಿಸಿದೆ. ಇನ್ನು ನಿನ್ನೆಯಷ್ಟೇ ದೈವದ ಹರಕೆಯನ್ನು ತೀರಿಸಿ ವಿಡಿಯೊವನ್ನು ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಯಾವಾಗ ತೆರೆಮೇಲೆ ಬರಲಿದೆ ಕಾಂತಾರ-2

ಇದರ ಬೆನ್ನಲ್ಲೇ ಇದೀಗ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ-2 ಚಿತ್ರದ ಬಗ್ಗೆ ಡೆಡ್‌ಲೈನ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದ ಚಿತ್ರೀಕರಣ ಯಾವಾಗ ಆರಂಭಗೊಳ್ಳಲಿದೆ ಹಾಗೂ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಸದ್ಯ ಚಿತ್ರದ ಕಥೆ ಬರೆಯುತ್ತಿದ್ದು, ತನ್ನ ಸಹ ಬರಹಗಾರರ ಜತೆ ಕರ್ನಾಟಕದ ಕರಾವಳಿ ಕಾಡಿನ ಒಳಗೆ ಚಿತ್ರಕ್ಕಾಗಿ ಸಂಶೋಧನೆಗೆ ಇಳಿದಿದ್ದಾರೆ. ಮಳೆಗಾಲದಲ್ಲಿ ಕೆಲ ಭಾಗವನ್ನು ಚಿತ್ರೀಕರಿಸಬೇಕಾಗಿರುವ ಕಾರಣ ರಿಷಬ್ ಶೆಟ್ಟಿ ಜೂನ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ. ಇನ್ನು ಈ ಸಿನಿಮಾವನ್ನು 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಭಾರತದಾದ್ಯಂತ (ಪ್ಯಾನ್ ಇಂಡಿಯಾ) ಬಿಡುಗಡೆ ಮಾಡುವುದು ನಮ್ಮ ಗುರಿ ಎಂದು ತಿಳಿಸಿದ್ರು.

ಕಾಂತಾರ-2 ಸಿಕ್ವೇಲ್ ಅಲ್ಲ, ಪ್ರಿಕ್ವೇಲ್

ಹೌದು, ಕಾಂತಾರ-2 ಸಿನಿಮಾ ಕಾಂತಾರ ಚಿತ್ರದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ. ಈ ಬಾರಿ ಕಾಂತಾರ ಚಿತ್ರದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ.

ಕಾಂತಾರ ಚಿತ್ರದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ಪ್ರಿಯರು ನಿರೀಕ್ಷಿಸಬಹುದು.

Leave a reply

Your email address will not be published. Required fields are marked *