ಕಾರವಾರ: ಹೊನ್ನಾವರದ ಅಳಿವೆಯಲ್ಲಿ ಪರ್ಸಿನ್ ಬೋಟ್ ವೊಂದು ಮುಳುಗಿದ್ದು, ಅದರಲ್ಲಿದ್ದ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ಬೆಳಗ್ಗೆ ಮೀನುಗಾರಿಕೆಗಾಗಿ ಹೊರಡುವಾಗ ಗಾಳಿ ಜೋರಾಗಿದ್ದರಿಂದ ಬೋಟ್ ಮುಳುಗಿದೆ. ಹೊನ್ನಾವರದ ಬೋಟ್ ಇದಾಗಿದೆ. ಬೆಳಗ್ಗೆ ಸುಮಾರು 6.30ಕ್ಕೆ ಈ ಘಟನೆ ನಡೆದಿದೆ. ಅಕ್ಕಪಕ್ಕದಲ್ಲಿದ್ದ ಬೋಟ್ ನವರು ತಕ್ಷಣ ನೆರವಿಗೆ ಬಂದಿದ್ದರಿಂದ ಮೀನುಗಾರರಿಗೆ ಯಾವುದೇ ತೊಂದರೆ ಆಗಿಲ್ಲ.

ಅರಬ್ಬಿ ಸಮುದ್ರದಲ್ಲಿ ಗಾಳಿ ಜೋರಾಗಿ ಬೀಸುತ್ತಿದೆ. ಹಾಗಾಗಿ ಬೋಟ್ ಗಳಿಗೆ ತೊಂದರೆಯಾಗುತ್ತಿದೆ. ಮುಳುಗಡೆ ಆಗಿರುವ ಹೊನ್ನಾವರದ ಬೋಟ್ ಅಳಿವೆ ಅಂಚಿನಲ್ಲಿಯೇ ದುರ್ಘಟನೆಗೆ ಸಿಲುಕಿದ್ದರಿಂದ ಹೆಚ್ಚಿನ ಅಪಾಯ ಎದುರಾಗಿಲ್ಲ. ಬೋಟಿಯಲ್ಲಿ ಲಕ್ಷಾಂತರ ರೂ. ಬೆಲೆಯ ಬಲೆಗಳು ಇದ್ದವು.

ಬೋಟ್ ಮುಳುಗಿರುವ ಸುದ್ದಿ ವೇಗವಾಗಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಮೀನುಗಾರರು ಜಾಗೃತರಾಗಿದ್ದಾರೆ. ಹವಾಮಾನ ವೈಪರಿತ್ಯ ಪದೇ ಪದೆ ಮೀನುಗಾರಿಕೆಗೆ ಅಡ್ಡಿಯಾಗುತ್ತಿರುವುದು ಮೀನುಗಾರರ ಬದುಕನ್ನು ಕಷ್ಟಕ್ಕೆ ಸಿಲುಕಿಸಿದೆ. ಬೋಟ್ ಮುಳುಗಿದ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.

ಬೋಟ್ ಮುಳುಗಡೆಯಾಗುತ್ತಿರುವ ವಿಡಿಯೊ ನೋಡಿ