Select Page

ಗಣಪತಿ ಉಳ್ವೇಕರ್ ಗೆ ಬಿಜೆಯ ರಾಜ್ಯ ಮಟ್ಟದ ಹುದ್ದೆ

ಗಣಪತಿ ಉಳ್ವೇಕರ್ ಗೆ ಬಿಜೆಯ ರಾಜ್ಯ ಮಟ್ಟದ ಹುದ್ದೆ

ಕಾರವಾರ: ಬಿಜೆಪಿಯ ಹಿರಿಯ ಮುಖಂಡ ಗಣಪತಿ ಉಳ್ವೇಕರ್ ಅವರಿಗೆ ಬಿಜೆಪಿ ರಾಜ್ಯ ಪ್ರಕೋಷ್ಠಗಳ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ ಕುಮಾರ ಕಟೀಲ್ ನೇತೃತ್ವದ ರಾಜ್ಯ ಮಟ್ಟದ 14 ಪ್ರಕೋಷ್ಠಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಗಣಪತಿ ಉಳ್ವೇಕರ್ ಅವರಿಗೂ ಸ್ಥಾನ ನೀಡಲಾಗಿದೆ.

ಮೀನುಗಾರರ ಪ್ರಕೋಷ್ಠದ ಸಹ ಸಂಚಾಲಯಕರಾಗಿ ಗಣಪತಿ ಉಳ್ವೇಕರ್ ಅವನ್ನು ನೇಮಿಸಲಾಗಿದೆ. ಸಂಚಾಲಕರಾಗಿ ಉಡುಪಿ ಜಿಲ್ಲೆಯ ಯಶಪಾಲ್ ಸುವರ್ಣ ಅವರನ್ನು ನೇಮಿಸಲಾಗಿದೆ.

ಬಿಜೆಪಿ ರಾಜ್ಯ ಘಟಕ ಪ್ರಕಟಿಸಿದ ಪ್ರಕೋಷ್ಠದ ತಂಡದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬೇರೆ ಯಾರನ್ನೂ ನೇಮಿಸಿಲ್ಲ. ಮೀನುಗಾರ ಸಮುದಾಯದ ಮುಖಂಡರೂ ಆಗಿರುವ ಗಣಪತಿ ಉಳ್ವೇಕರ ಅವರು ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ.

Leave a reply

Your email address will not be published. Required fields are marked *