ನವೋದಯ ವಿದ್ಯಾಲಯ ಸಮಿತಿಯು ನವೋದಯ ವಿದ್ಯಾಲಯಗಳಲ್ಲಿ 2023-24ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜನವರಿ 02, 2023 ರಿಂದ 31-01-2023ರೊಳಗೆ ಅರ್ಜಿ ಸಲ್ಲಿಸಬೇಕು. 29-04-2023 ರಂದು ಪರೀಕ್ಷೆ ನಡೆಸಲಾಗುವುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ನವೋದಯ ಸಮಿತಿಯ ಮೂಲಕ ಅಧಿಕೃತ ವೆಬ್‌ಸೈಟ್ https://navodaya.gov.in/

ಅರ್ಹತೆ

-ಆಯಾ ಜಿಲ್ಲೆಯ ವಿದ್ಯಾರ್ಥಿಗಳು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನವೋದಯ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು.

-ಸರ್ಕಾರಿ ಮತ್ತು ಸರ್ಕಾರದಿಂದ ಗುರುತಿಸಲ್ಪಟ್ಟ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

-ವಿದ್ಯಾರ್ಥಿಗಳು 01-05-2011 ರಿಂದ 30-04-2013 ರ ರೊಳಗಾಗಿ ಜನಿಸಿರಬೇಕು.

ಮೀಸಲಾತಿ ವಿವರ

-ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೇಕಡ 75ರಷ್ಟು ಮೀಸಲಾತಿ

-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ದಿವ್ಯಾಂಗರಿಗೆ ಸರ್ಕಾರದ ನಿಯಮದಂತೆ ಮೀಸಲಾತಿ ಇರುತ್ತೆ

-ಶೇಕಡಾ 1/3 ರಷ್ಟು ಸೀಟ್ ಗಳು ಹುಡುಗಿಯರಿಗೆ ಮೀಸಲಾಗಿರುತ್ತವೆ