ಕಾರವಾರ: ದೋಣಿಯ ಎಂಜಿನ್ ಕೆಟ್ಟು ಅಳ್ವೆಕೋಡಿ ಸಮೀಪ ಅರಬ್ಬಿ ಸಮುದ್ರದಲ್ಲಿ ಸಿಲುಕಿಕೊಂಡಿರುವ ಮೀನುಗಾರರು ಕುಡಿಯುವುದಕ್ಕೂ ನೀರಿಲ್ಲದೆ ಪರದಾಡುತ್ತಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಮೋಟಾರೀಕೃತ ದೋಣಿ (ಎಂಓ) ಎಂಜಿನ್ ವೈಫಲ್ಯದಿಂದ ಅರಬ್ಬಿ ಸಮುದ್ರದ ನಡುವೆಯೇ ಬಂದ್ ಆಗಿದೆ. ಅಳ್ವೆಕೋಡಿಯಿಂದ ಸುಮಾರು ಐದು ನಾಟಿಕಲ್ ಅಂತರದಲ್ಲಿ ಈ ದೋಣಿ ಸಿಲುಕಿಕೊಂಡಿದ್ದು, ಮೀನುಗಾರರು ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ಅದೇ ದೋಣಿಯಲ್ಲಿರುವ ಮೀನುಗಾರ ಸಚಿನ್ ದೂರವಾಣಿ ಮೂಲಕ ದಿ ಸ್ಟೇಟ್ ನೆಟ್ವರ್ಕ್ ನೊಂದಿಗೆ ಮಾತನಾಡಿದ್ದಾರೆ. ಎಂಜಿನ್ ಬಂದ್ ಆಗಿದ್ದರಿಂದ ಸಮುದ್ರದಲ್ಲಿಯೇ ಸಿಲುಕಿಕೊಂಡಿದ್ದೇವೆ. ಕುಡಿಯುವುದಕ್ಕೆ ನೀರು ಕೂಡ ಇಲ್ಲ. ಮೊಬೈಲ್ ನಲ್ಲಿ ಚಾರ್ಜ್ ಕೂಡ ಕಡಿಮೆ ಇದೆ. ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ಮೊಬೈಲ್ ಸ್ವಿಚ್ ಆಫ್ ಆಗುವ ಮೊದಲೇ ಪರಿಚಯಸ್ಥರೊಬ್ಬರಿಗೆ ವಾಟ್ಸಾಪ್ ಮೂಲಕ ಲೊಕೇಷನ್ ಶೇರ್ ಮಾಡುವಂತೆ ಸಲಹೆ ನೀಡಿದ ಬಳಿಕ ಮೀನುಗಾರರು ಪರಿಚಯದ ಪೊಲೀಸರೊಬ್ಬರಿಗೆ ಈಗಲೇ ಶೇರ್ ಮಾಡಿಕೊಳ್ಳುತ್ತೇವೆ. ಮೊಬೈಲ್ ಸ್ವಿಚ್ ಆಫ್ ಆದ ಬಳಿಕ ತೀರದಲ್ಲಿರುವವನ್ನು ಸಂಪರ್ಕಿಸಲು ಕಷ್ಟವಾಗಬಹುದು ಎಂದರು.

ಸಮುದ್ರದಲ್ಲಿ ತೂಫಾನ್

ಅಳ್ವೆಕೋಡಿಯ ಮೀನುಗಾರರು ಇರುವ ದೋಣಿ ಐದು ನಾಟಿಕಲ್ ಅಂತರದಲ್ಲಿ ಇದೆ. ಅದರಲ್ಲಿರುವ ನಾಲ್ಕು ಮಂದಿ ಮೀನುಗಾರರು ಅಳ್ವೆಕೋಡಿ ಯವರಾಗಿದ್ದಾರೆ. ಹತ್ತಿರದ ಗುಡ್ಡದ ಸಮೀಪ ಲಂಗರು ಹಾಕಿಕೊಂಡು ಇರುವುದರಿಂದ ಸಹಾಯಕ್ಕೆ ಕೋರಿದ್ದಾರೆ.

ಅವರಿಗೆ ಯಾವುದೇ ತೊಂದರೆ ಸದ್ಯಕ್ಕೆ ಇಲ್ಲ. ಆದರೂ ಸಮುದ್ರದಲ್ಲಿ ಪ್ರಕ್ಷುಬ್ದ ವಾತಾವರಣ ಇರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಅವರ ಸಮೀಪ  ಕಾರವಾರ ಕಡೆಯಿಂದ ಒಂದು ಯಾಂತ್ರಿಕೃತ ಬೋಟು ಮುಂಖಾಂತರ ತೆರಳಲು ಮಾಹಿತಿ ನೀಡುವ ಸಲುವಾಗಿ ಹಾಗೂ ಮೀನುಗಾರರ ರಕ್ಷಣೆಗಾಗಿ  ಸಹಕರಿಸುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.