ಉಚಿತ ಕುರಿ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಕಿಟಸರ್ಡ್)ಯಿಂದ ಜುಲೈ 26 ರಿಂದ ಆಗಸ್ಟ್ 4ರ ವರೆಗೆ ಹತ್ತು ದಿನಗಳ ಕಾಲ ಕುರಿ ಸಾಕಾಣಿಕೆ ಕುರಿತು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.
ಇದಕ್ಕಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಭಾಗದ 18 ರಿಂದ 45 ವರ್ಷದೊಳಗಿನ ಬಿ.ಪಿ.ಎಲ್. ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಸಮಯದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತರಬೇತಿ ಸಂಸ್ಥೆಯಿAದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.
ಕೃಷಿಯಲ್ಲಿ ಸಾಪ್ಟವೇರ್ ಎಂಜಿನಿಯರ್‌ಗಳನ್ನೇ ಮೀರಿಸಿದ ಸಾಧಕಿ
ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬಿ.ಪಿ.ಎಲ್ ಪಡಿತರ ಚೀಟಿ, ಬ್ಯಾಂಕ್ ಪಾಸ್‌ಬುಕ್ ಜಿರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಐದು ಭಾವಚಿತ್ರ ದಾಖಲಾತಿಗಳೊಂದಿಗೆ 2021 ಜುಲೈ 23 ರೊಳಗಾಗಿ ಸಲ್ಲಿಸಬೇಕು.
ಜುಲೈ 23 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯುವರೆಗೆ ತರಬೇತಿ ಸಂಸ್ಥೆ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಸಂದರ್ಶನಕ್ಕೆ ಹಾಜರಾಗಬೇಕೆಂದು ಕೋರಲಾಗಿದೆ.
ಅಭ್ಯರ್ಥಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9243602888, 9886781239ಗೆ ಸಂಪರ್ಕಿಸಲು ಕೋರಲಾಗಿದೆ. ಕಲಬುರಗಿ ಜಿಲ್ಲೆಯವರಿಗಾಗಿ ಈ ತರಬೇತಿ ಆಯೋಜಿಸಲಾಗಿದೆ.
ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?
