ಉತ್ತರ ಕನ್ನಡದಲ್ಲಿ ಐದು ಸಾವಿರದ ಗಡಿ ದಾಟಿದ ಕೊರೋನಾ ಪ್ರಕರಣ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 103 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ ಐದು ಸಾವಿರದ ಗಡಿ ದಾಟಿದೆ.
ಕಳೆದ ಎಂಟು ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಪ್ರತಿದಿನ ಶತಕ ಬಾರಿಸುತ್ತಿದೆ. ಇಂದು ದೃಢ ಪಟ್ಟ 103 ಪ್ರಕರಣಗಳ ಮೂಲಕ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 5,069ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಇಂದು ಒಟ್ಟೂ 68 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 3811ಕ್ಕೆ ತಲುಪಿದೆ.
ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕೊರೋನಾ ಸೋಂಕಿನ ಪ್ರಕರಣಗಳು ದೃಢ ಪಟ್ಟಿದೆ. ಹಳಿಯಾಳದಲ್ಲಿ ಅತೀ ಹೆಚ್ಚು 29 ಪ್ರಕರಣಗಳು ಪತ್ತೆಯಾದರೆ, ಕಾರವಾರದಲ್ಲಿ 6, ಅಂಕೋಲಾ 11, ಕುಮಟಾ 4, ಹೊನ್ನಾವರ 9, ಭಟ್ಕಳ 8, ಶಿರಸಿ 25, ಸಿದ್ದಾಪುರ 3, ಯಲಾಪುರ 1, ಮುಂಡಗೋಡ 6 ಹಾಗೂ ಜೋಯಿಡಾ 1 ಪ್ರಕರಣಗಳು ದೃಢ ಪಟ್ಟಿವೆ.
ಸಕ್ರಿಯ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು:
ಜಿಲ್ಲೆಯ ವಿವಿಧ ತಾಲೂಕು ಕೋವಿಡ್ ಕೇಂದ್ರಗಳಿಂದ ಇಂದು ಒಟ್ಟೂ 68 ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 3811ಕ್ಕೆ ತಲುಪಿದೆ. ಕಾರವಾರ 3, ಅಂಕೋಲಾ 5, ಹೊನ್ನಾವರ 27, ಯಲ್ಲಾಪುರ 2, ಮುಂಡಗೋಡ 6 ಹಾಗೂ ಹಳಿಯಾಳ 25 ಮಂದಿ ಬಿಡುಗಡೆಯಾಗಿದ್ದಾರೆ.
ಇದುವರೆಗೆ ಕಾರವಾರ 393, ಅಂಕೋಲಾ 215, ಕುಮಟಾ 378, ಹೊನ್ನಾವರ 248, ಭಟ್ಕಳ 579, ಶಿರಸಿ 297, ಸಿದ್ದಾಪುರ 111, ಯಲ್ಲಾಪುರ 162, ಮುಂಡಗೋಡ 315, ಹಳಿಯಾಳ 1070 ಹಾಗೂ ಜೋಯಿಡಾದಲ್ಲಿ 43 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇನ್ನು ಇಂದು ದೃಢಪಟ್ಟ 103 ಕೊರೊನಾ ಪ್ರಕರಣಗಳಿಂದಾಗಿ ಜಿಲ್ಲೆಯ ಒಟ್ಟೂ ಸಕ್ರಿಯ ಸೋಂಕಿತರ ಸಂಖ್ಯೆ 1204ಕ್ಕೆ ತಲುಪಿದೆ. ಕಾರವಾರ 161, ಅಂಕೋಲಾ 54, ಕುಮಟಾ 84, ಹೊನ್ನಾವರ 134, ಭಟ್ಕಳ 119, ಶಿರಸಿ 145, ಸಿದ್ದಾಪುರ 32, ಯಲ್ಲಾಪುರ 90, ಮುಂಡಗೋಡ 77, ಹಳಿಯಾಳ 245 ಹಾಗೂ ಜೋಯಿಡಾ 63 ಸಕ್ರಿಯ ಪ್ರಕರಣಗಳಿವೆ.
685 ಮಂದಿ ವಿವಿಧ ತಾಲೂಕುಗಳ ಕೋವಿಡ್ ಕೇಂದ್ರದಲ್ಲಿದ್ದಾರೆ. ಆ ಪೈಕಿ ಲಕ್ಷಣಗಳಿರುವ ಸೋಂಕಿತರು ಮಾತ್ರ ಕಾರವಾರದ ಕಿಮ್ಸ್ನ ಕೋವಿಡ್ ವಾರ್ಡ್ನಲ್ಲಿ ಆರೈಕೆಯಲ್ಲಿದ್ದಾರೆ. ಉಳಿದ 519 ಮಂದಿ ಹೋಂ ಐಸೋಲೇಷನ್ನಲ್ಲಿ ನಿಗಾದಲ್ಲಿದ್ದಾರೆ.
54ಕ್ಕೇರಿದ ಸೋಂಕಿತರ ಸಾವಿನ ಸಂಖ್ಯೆ:
ಮುಂಡಗೋಡ ತಾಲೂಕಿನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಓರ್ವ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ದೃಢ ಪಡಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟ ಕೊರೊನಾ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಈವರೆಗೆ ಅತೀ ಹೆಚ್ಚು ಸಾವುಗಳು ಭಟ್ಕಳ ಹಾಗೂ ಹಳಿಯಾಳದಲ್ಲಿ ಸಂಭವಿಸಿದೆ. ಎರಡೂ ತಾಲೂಕುಗಳಲ್ಲಿ ತಲಾ 13 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಾರವಾರದಲ್ಲಿ 7, ಶಿರಸಿ ಹಾಗೂ ಹೊನ್ನಾವರ ತಲಾ 6, ಅಂಕೋಲಾ ಹಾಗೂ ಮುಂಡಗೋಡದಲ್ಲಿ ತಲಾ 4, ಯಲ್ಲಾಪುರ 1 ಸೇರಿ ಒಟ್ಟೂ 54 ಮಂದಿ ಕೊರೋನಾ ಸೋಂಕಿತರ ಸಾವು ಸಂಭವಿಸಿವೆ.
