ಭಾರತದಲ್ಲಿ ಪತ್ತೆಯಾಗಿರುವ ಇದೊಂದು ಆಮೆ ಬಾರೀ ಚರ್ಚೆ ಹುಟ್ಟುಹಾಕಿದೆ. ಸಾಮಾನ್ಯವಾಗಿ ಹಸಿರು, ತಿಳಿ ಗಪ್ಪು ಬಣ್ಣದ ಆಮೆಗಳನ್ನು ನೋಡಿದ್ದೇವೆ. ಆದರೆ, ಹಳದಿ ಬಣ್ಣದ ಆಮೆಯೊಂದು ಓಡಿಶಾದಲ್ಲಿ ಪತ್ತೆಯಾಗಿದ್ದು, ಅದರ ಫೋಟೊ, ವಿಡಿಯೊ ಭಾರೀ ವೈರಲ್ ಆಗಿದೆ. ಅದು ನೀರಿನಲ್ಲಿ ಓಡಾಡುವ ರೀತಿ ಪುಳಕ ಹುಟ್ಟಿಸುತ್ತಿದೆ.

ಈ ಅಪರೂಪದ ಹಳದಿ ಆಮೆಯನ್ನು ಒಡಿಶಾದ ಬಾಲಸೋರ್ ಜಿಲ್ಲೆಯ ಸುಜನ್ ಪುರ ಎನ್ನುವ ಗ್ರಾಮದ ಜನರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇದರ ಛಾಯಾಚಿತ್ರಗಳನ್ನು ಸುದ್ದಿ ಸಂಸ್ಥೆ ಐಎನ್ಐ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಹಳದಿ ಬಣ್ಣದ ಆಮೆ ನೋಡಲು ವಿಶೇಷ ಮತ್ತು ಕುತೂಹಲಕಾರಿಯಾಗಿ ಕಾಣಿಸುತ್ತಿದೆ.

ವೈರಲ್ ವಿಡಿಯೊ: ಪಂಜರ ಇಟ್ಟವರಿಗೇ ಚಳ್ಳೆ ಹಣ್ಣು ತಿನ್ನಿಸಿದ ಚತುರ ಚಿರತೆ

ಈ ಆಮೆಯ ವಿಡಿಯೊ ಮತ್ತು ಚಿತ್ರವನ್ನು ಭಾರತದ ಅನೇಕ ಐಎಫ್ ಎಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇಂಥದ್ದೊಂದು ಆಮೆಯನ್ನು ನಾನು ನೋಡಿಯೇ ಇಲ್ಲ’ ಎಂದು ವನ್ಯಜೀವಿ ವಾರ್ಡನ್ ಬಿ ಆಚಾರ್ಯ ತಿಳಿಸಿರುವ ಬಗ್ಗೆ ಎಎನ್ಐ ವರದಿ ಮಾಡಿವೆ.

ಭೂಮಿಯನ್ನೇ ನಡುಗಿಸಬಲ್ಲದು ಆನೆಗಳ ಕಾದಾಟ

ಜತೆಗೆ ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಸುಸಂತಾ ನಂದಾ ಕೂಡ “ಸಣ್ಣ ಆಮೆಯ ವೀಡಿಯೊವನ್ನು ಟ್ವೀಟ್ ಮಾಡಿ, “ಬಹುಶಃ ಇದು ಅಲ್ಬಿನೋ (ಬಿಳಿ ಮಚ್ಚೆ ರೀತಿ) ಆಗಿರಬಹುದು”ಎಂದು ಹೇಳಿದ್ದಾರೆ. ಆಮೆ ನೀರಿನ ತೊಟ್ಟಿಯಲ್ಲಿ ಈಜುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ. “ಆಮೆಯನ್ನು ಹತ್ತಿರದಿಂದ ನೋಡಿದರೆ ಗುಲಾಬಿ ಬಣ್ಣದ ಕಣ್ಣು ಕಾಣಿಸುತ್ತದೆ. ಆಲ್ಬಿನಿಸಂ ಆಗಿರುವ ಸಣ್ಣ ಸೂಚಕ ಲಕ್ಷಣಗಳು ಕಾಣಿಸುತ್ತವೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಬೇಟೆಗಾರರ ಬಂದೂಕು ಕಸಿದು ಬೆನ್ನಟ್ಟಿದ 10ನೇ ತರಗತಿ ಬಾಲಕ

ಟ್ವಿಟರ್ ನಲ್ಲಿ ಹಲವಾರು ಜನರು ಈ ಮೊದಲು ಹಳದಿ ಬಣ್ಣದ ಆಮೆಯನ್ನು ನೋಡಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಇದು ಮಚ್ಚೆಯಿಂದ ಹೀಗಾಗಿ ಎಂದು ಹೇಳಿದ್ದಾರೆ.

ಮಾವು ಬೆಳೆಯಲ್ಲಿ ಇಸ್ರೇಲ್ ತಂತ್ರಜ್ಞಾನ; ಭರ್ಜರಿ ಆದಾಯ

ಅದರಲ್ಲಿ ಒಬ್ಬರು, “ಹೊಸತೇನೂ ಇಲ್ಲ, ಇದು ಅಲ್ಬಿನೋ ಇಂಡಿಯನ್ ಫ್ಲಾಪ್‌ಶೆಲ್ ಆಮೆ, ಈ ಆಮೆಗಳು ಭಾರತದಾದ್ಯಂತ ಕಂಡುಬರುತ್ತವೆ. ಜಾತಿಗಳು ಸಾಮಾನ್ಯವಾಗಿದ್ದರೂ, ಈ ನಿರ್ದಿಷ್ಟ ಮಾದರಿಯು 10,000 ಶಿಶುಗಳಲ್ಲಿ 1 ಮಾತ್ರ ಅಲ್ಬಿನೋ ಆಗಿ ಹೊರಬರುವುದರಿಂದ ಬಹಳ ವಿಶೇಷವಾಗಿದೆ. ಇವು ಕಾಡಿನಲ್ಲಿ ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ”ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.