ಶಿಕ್ಷಕರ ವರ್ಗಾವಣೆ ನಿಯಮಗಳುಳ್ಳ 2020ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿದೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರವಾಗಿದ್ದು, ಕೆಲವು ಸುಧಾರಿತ ಕ್ರಮಗಳಿಗೆ ಶಿಕ್ಷಣ ಸಚಿವ ಸುರೇಶಕುಮಾರ ಅವರು ಆಧ್ಯತೆ ಕೊಟ್ಟಿದ್ದಾರೆ. ಈ ವಿದೇಯಕ ಇಲ್ಲಿಗೆ ಪೂರ್ಣಗೊಳ್ಳುವುದಿಲ್ಲ. ವಿದೇಯಕ ವಿಧಾನ ಪರಿಷತ್ ನಲ್ಲಿಯೂ ಅಂಗೀಕಾರವಾಗಬೇಕಿದೆ. ಆಗ ಅದು ಪೂರ್ಣ ಕಾಯ್ದೆಯಾಗುತ್ತದೆ. ಬುಧವಾರ ಮೇಲ್ಮನೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ವಿಧಾನಸಭೆಯಲ್ಲಿ ಅಂಗೀಕಾರವಾದ ವಿದೇಯಕದಲ್ಲಿ ಏನಿದೆ?

ಶಿಕ್ಷಕರು ವರ್ಗಾವಣೆ ಹೊಂದಲು ಒಂದು ಶಾಲೆಯಲ್ಲಿ ಐದು ವರ್ಷಗಳು ಸೇವೆ ಸಲ್ಲಿಸಬೇಕಿದ್ದ ಮಿತಿಯನ್ನು ಈಗ ಮೂರು ವರ್ಷಗಳಿಗೆ ಇಳಿಸಲಾಗಿದೆ.
ಹೆಚ್ಚುವರಿ ಹಾಗೂ ವಲಯ ವರ್ಗಾವಣೆಯವರಿಗೆ ಕೋರಿಕೆ ವರ್ಗಾವಣೆಯಲ್ಲಿ ಅವಕಾಶ.
ಹೊಸದಾಗಿ ನೇಮಕಾತಿಯಾದವರು “ಸಿ’ ವರ್ಗದಲ್ಲಿ ಕೆಲಸ ಮಾಡುವುದು ಕಡ್ಡಾಯ.
ಸಿ.ಆರ್. ಪಿ, ಬಿ.ಆರ್.ಪಿ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ತುಂಬುವುದು,ಇದನ್ನು ಕಾಯಿದೆಯಲ್ಲಿ ಅಳವಡಿಸಲಾಗಿದೆ.
ಮಾಜಿ ಸೈನಿಕ ಪ್ರಕರಣಗಳನ್ನು ವಿನಾಯಿತಿ ನೀಡಲಾಗಿದೆ.
ಒಂದೇ ತಾಲೂಕಿನಲ್ಲಿ ವರ್ಗಾವಣೆ ಹೊಂದುವ ದಂಪತಿ ಪ್ರಕರಣಗಳಿಗೆ ಮಿತಿ ಹಾಕಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯಲ್ಲಿ ಜಿಲ್ಲಾ ಘಟಕವನ್ನು ಮುಂದುವರೆಸಲಾಗಿದೆ.

ವಲಯವಾರು ವರ್ಗಾವಣೆ ವಿನಾಯಿತಿ
50 ವರ್ಷ ವಯಸ್ಸಾದ ಶಿಕ್ಷಕಿಯರು, 55 ವರ್ಷ ವಯಸ್ಸಾದ ಶಿಕ್ಷಕರಿಗೆ, ಅಂಗವಿಕಲರಿಗೆ ವಲಯವಾರು ವರ್ಗಾವಣೆಯಿಂದ ವಿನಾಯಿತಿ.

ವಿಧವೆ ಶಿಕ್ಷಕಿಯರ ಜೊತೆಗೆ ವಿಧುರ ಶಿಕ್ಷಕರಿಗೆ ಹಾಗೂ ಗರ್ಭಿಣಿ ಶಿಕ್ಷಕಿಯರಿಗೆ,ಒಂದು ವರ್ಷದೊಳಗಿನ ಮಗು ಹೊಂದಿರುವ ಶಿಕ್ಷಕಿಯರಿಗೆ ಜೊತೆಗೆ ತೀವ್ರತರ ಕಾಯಿಲೆ ಪ್ರಕರಣ ಹೊಂದಿರುವ ಮಗುವಿನ ಶಿಕ್ಷಕಿಯರಿಗೆ ವರ್ಗಾವಣೆ ಆದ್ಯತೆ ಅಥವಾ ವಿನಾಯಿತಿಯಲ್ಲಿ ಪರಿಗಣಿಸಲಾಗಿದೆ.
ಸಿಆರ್ ಪಿ, ಬಿಆರ್ ಪಿ ಹುದ್ದೆಗಳ ಅವಧಿಯನ್ನು 3 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.
ವಿಶೇಷ ಪ್ರಕರಣಗಳನ್ನು ಹಾಗೂ ಪರಸ್ಪರ ವರ್ಗಾವಣೆಯನ್ನು ಶೇಕಡವಾರು ಮಿತಿಯಿಂದ ಮುಕ್ತಗೊಳಿಸಲಾಗಿದೆ.
ಅವಧಿ ಮುಗಿದ ಸಿ ಆರ್‌ಪಿ, ಬಿ ಆರ್ ಪಿ ಯವರನ್ನು 20% ಕ್ಕಿಂತ ಹೆಚ್ಚಿನ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆಗೊಳಿಸಬೇಕು ಎಂಬ ನಿಯಮ ತೆಗೆಯಲಾಗಿದೆ.

10-03-2020ರ ವಿಧಾನಸಭೆಯ ಚರ್ಚೆಯ ವಿಷಯಗಳು Click Hear