Select Page

ತಾಲೂಕು ಪಂಚಾಯಿತಿಗೆ 226 ಹೊಸ ಉದ್ಯೋಗ ಸೃಷ್ಟಿ

ತಾಲೂಕು ಪಂಚಾಯಿತಿಗೆ 226 ಹೊಸ ಉದ್ಯೋಗ ಸೃಷ್ಟಿ

ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಮತ್ತೊಂದು ಸಿಹಿ ಸುದ್ದಿ. ಕೊರೊನಾದಂಥ ಆಪತ್ ಕಾಲದಲ್ಲಿಯೂ ರಾಜ್ಯ ಸರಕಾರ ರಾಜ್ಯದ 226 ತಾಲೂಕು ಪಂಚಾಯಿತಿಗಳಿಗೆ ಹೊಸ ಹುದ್ದೆ ಸೃಷ್ಟಿಸಿ ಆದೇಶ ಹೊರಡಿಸಿದೆ.

ತಾಲೂಕು ಪಂಚಾಯಿತಿಗಳಲ್ಲಿ ಈಗಾಗಲೇ ಇರುವ ಸಹಾಯಕ ನಿರ್ದೇಶಕರ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಸಹಾಯಕ ನಿರ್ದೇಶಕರ ಹುದ್ದೆಯನ್ನು ಸೃಜಿಸಿದೆ.

ಅಂದರೆ, ರಾಜ್ಯದ 226 ತಾಲೂಕು ಪಂಚಾಯಿತಿಗಳಲ್ಲಿ ಹೊಸದಾಗಿ 226 ಸಹಾಯಕ ನಿರ್ದೇಶಕ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಈಗಿರುವ ವೃಂದ ಮತ್ತು ನಿಯಮಗಳ ಅನ್ವಯವೇ ಹೊಸ ಹುದ್ದೆಗಳ ನೇಮಕಾತಿ ನಡೆಯಲಿದೆ.

ಇದು ಪಿಡಿಒ ಅವರಿಗಿಂತ ಉನ್ನತ ಹುದ್ದೆಯಾಗಿದೆ. ರಾಜ್ಯ ಸರಕಾರದ ಸದ್ಯದಲ್ಲಿಯೇ ಹೊಸ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಲಿದೆ.

Leave a reply

Your email address will not be published. Required fields are marked *