ಉತ್ತರ ಕನ್ನಡ: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ನಿಷ್ಠೆಯಿಂದಲೇ ರಾಜ್ಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಅಶೋಕ ಗಸ್ತಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ದೇಶಾದ್ಯಂತ ಹರಡಿದ್ದು, ರಾಜ್ಯದಲ್ಲಿ ಗೊಂದಲ ಎದ್ದಿದೆ.

ಅಶೋಕ ಗಸ್ತಿ ಅವರು ನಿಧನರಾಗಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಆದರೆ, ಅಶೋಕ ಗಸ್ತಿ ಅವರು ಇನ್ನೂ ನಿಧರಾಗಿಲ್ಲ. ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಕುಟುಂಬಸ್ಥರು, ಆಸ್ಪತ್ರೆ ಮೂಲಗಳು ತಿಳಿಸಿವೆ. ಬಳಿಕ ಕೆಲ ಮುಖಂಡರು ಟ್ವೀಟ್ ಡಿಲಿಟ್ ಮಾಡಿದ್ದಾರೆ.

ಅಶೋಕ ಗಸ್ತಿ ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಆದರೆ, ಮಾಧ್ಯಮದಲ್ಲಿ ನಿಧನ ಸುದ್ದಿ ಹರಿದಾಡುತ್ತಿದ್ದಂತೆಯೇ ಅಶೋಕ ಗಸ್ತಿ ಅವರು ನಿಧನರಾಗಿದ್ದಾರೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಈಗ ಅದೇ ಮಾಧ್ಯಮ ಸುದ್ದಿ ಸುಳ್ಳು. ಅಶೋಕ ಗಸ್ತಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಸವಿತಾ ಸಮಾಜದ ರಾಜ್ಯ ಘಟಕ ಕೂಡ ಪ್ರಕಟಣೆ ಹೊರಡಿಸಿದೆ.

ಬಿಜೆಪಿಯ ಮೂಲಗಳ ಪ್ರಕಾರ, ಕಳೆದ ಮೂರು ದಿನಗಳಿಂದ ಅಶೋಕ ಗಸ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಂದು ಅವರನ್ನು ಐಸಿಯು ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಅಷ್ಟಕ್ಕೇ ಅವರು ನಿಧನರಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ಸುದ್ದಿ ಮಾಡಿವೆ. ಅದನ್ನೇ ನಂಬಿ ಹಲವು ಮುಖಂಡರು ಟ್ವೀಟ್ ಮಾಡಿದ್ದಾರೆ. ಆದರೆ, ಅಶೋಕ ಗಸ್ತಿ ಅವರಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ. ಕುಟುಂಬಸ್ಥರು ಆಸ್ಪತ್ರೆ ಬಳಿಯೇ ಇದ್ದಾರೆ ಎಂದು ತಿಳಿಸಿದ್ದಾರೆ.

https://twitter.com/rajnathsingh/status/1306575826347913216

ಆಸ್ಪತ್ರೆ ನಿರ್ದೇಶಕರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೊರೊನಾದಿಂದ ಬಂದ ನ್ಯೂಮೋನಿಯಾದಿಂದ ಅಶೋಕ ಗಸ್ತಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮಲ್ಟಿಆರ್ಗನ್ ವೈಫಲ್ಯದಿಂದ ಅವರನ್ನು ಐಸಿಯುಗೆ ವರ್ಗಾಯಿಸಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ. ಮನಿಶ್ ರೈ ಅವರ ವಾಟ್ಸಆ್ಯಪ್ ಸಂದೇಶದಲ್ಲಿ ತಿಳಿಸಲಾಗಿದೆ.

ಅಶೋಕ ಗಸ್ತಿ ಅವರು ಇತ್ತೀಚೆಗೆ ರಾಜ್ಯ ಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಕಾರ್ಯಕರ್ತರಾಗಿ ಈ ಹುದ್ದೆಗೇರಿದ ಅಶೋಕ ಗಸ್ತಿ ಅವರು ದೇಶಾದ್ಯಂತ ಸುದ್ದಿಯಾಗಿದ್ದರು.