
ಸರಕಾರಿ ಶಾಲಾ ಮಕ್ಕಳಿಗೆ ಪಪ್ಪಾಯ, ನುಗ್ಗೆ ಸೊಪ್ಪು: ಕೇಂದ್ರ ಸರಕಾರ ಸಲಹೆ

ಭಾರತದ ಕೃಷಿ ಸಂಸ್ಕೃತಿ, ನಾಡಿನ ನಮ್ಮ ರೈತ ಎಂದಿಗೂ ಶ್ರೇಷ್ಠ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಮ್ಮ ಮಕ್ಕಳಿಗೆ ಮಾತ್ರೆಗಳಿಗಿಂತ ದೇಶೀಯ ತರಕಾರಿ ಬೆಳೆಗಳೇ ಹೆಚ್ಚು ಶ್ರೇಷ್ಠ ಎನ್ನುವ ಬಗ್ಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಅದರಂತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆಗಳ ಕೈ ತೋಟಗಳಲ್ಲಿ ನುಗ್ಗೆ, ಪಪ್ಪಾಯ ಗಿಡಗಳನ್ನು ಬೆಳೆಸಬೇಕು ಮತ್ತು ಅದನ್ನು ಬಿಸಿಯೂಟದಲ್ಲಿ ಇತರ ತರಕಾರಿಗಳ ಜತೆ ಬಳಸಬೇಕು. ಆ ಬಗ್ಗೆ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದರೊಂದಿಗೆ ಮಾತ್ರೆಗಳಷ್ಟೇ ಅಲ್ಲ, ನಮ್ಮ ದೇಶೀಯ ತರಕಾರಿಗಳು ಸಹ ವ್ಯಾಪಕ ಕಬ್ಬಿಣಾಂಶ, ಪೋಶಕಾಂಶಗಳನ್ನು ಹೊಂದಿವೆ ಎಂಬುದನ್ನು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಮತ್ತೆ ದೃಢೀಕರಿಸಿದೆ.
ಇದನ್ನೂ ಓದಿ: ಗದ್ದೆಯಲ್ಲಿ ಉತ್ತಿ ಬಿತ್ತಿ ಕೃಷಿ ಮಾಡಿ ಕಲಿಸುವ ಸರಕಾರಿ ಶಾಲೆ
ಓದಿ: ಎಳನೀರ ಬಗ್ಗೆನಿಮಗೇನು ಗೊತ್ತು: ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

ಪೌಷ್ಠಿಕಾಂಶದ ಹೆಸರಿನಲ್ಲಿ ಮಕ್ಕಳಿಗೆ ಕಬ್ಬಿಣಾಂಶ ಇರುವ ಮಾತ್ರೆಗಳನ್ನು ಕೊಟ್ಟರೂ ಅದನ್ನು ತಿನ್ನುವವರಿಗಿಂತ ವಾಕರಿಗೆ ಮಾಡಿ ಬಿಸಾಡುವ ಮಕ್ಕಳೇ ಹೆಚ್ಚು. ಶಿಕ್ಷಕರಿಗೂ ಸಹ ಮಕ್ಕಳಿಗೆ ಆ ಮಾತ್ರೆ ಕೊಡುವುದು ಸವಾಲಿನ ಕೆಲಸ ಎಂಬುದು ಇಲಾಖೆಯೂ ಅರಿತಿದೆ. ಹೀಗಿರುವಾಗ ಮಕ್ಕಳಿಗೆ ದೇಶೀಯ ಧಾನ್ಯಗಳ ಮೂಲಕವೇ ಪೌಷ್ಟಿಕಾಂಶ ಕೊಡುವ ಬಗ್ಗೆ ಕೇಂದ್ರ, ರಾಜ್ಯ ಸರಕಾರಗಳು ಯೋಚಿಸಲು ಇದು ಸಕಾಲ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮೈಸೂರು ಮತ್ತು ಕೊಡಗಿನಲ್ಲಿ ಈಚೆಗೆ ಸರಕಾರಿ ಶಾಲೆಗಳ ಜಂಟಿ ಸಮೀಕ್ಷೆ ಕೈಗೊಂಡಿತ್ತು. ಸಮೀಕ್ಷೆ ಕುರಿತು ಶಿಕ್ಷಣ ಇಲಾಖೆಗೆ ಕೊಟ್ಟ ವರದಿಯಲ್ಲಿ ನುಗ್ಗೆ ಮತ್ತು ಪಪ್ಪಾಯದ ಮಹತ್ವವನ್ನು ವಿವರಿಸಿದೆ. ಅದರಂತೆ ರಾಜ್ಯದ ಅನುದಾನಿತ, ಸರಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಂದಹಾಗೆ ನುಗ್ಗೆ ರಪ್ತಿನಲ್ಲಿ ಜಗತ್ತಿನಲ್ಲಿಯೇ ಭಾರತ ನಂ.1 ಸ್ಥಾನದಲ್ಲಿದೆ.
ಇದನ್ನೂ ಓದಿ: ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ನುಗ್ಗೆಯಲ್ಲಿ ಅಂಥದ್ದೇನಿದೆ?
ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ
ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ
ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ
ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್ ಎ
ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ
ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ
ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್
ಏನೇನು ಪ್ರಯೋಜನ?
ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.
ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.