ಕೃಷಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಅರಣ್ಯ ಇಲಾಖೆಯ ವತಿಯಿಂದ ’ಕೃಷಿ ಅರಣ್ಯ ಪ್ರೋತ್ಸಾಹ’ ಯೋಜನೆಯಡಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಿ, ಬದುಕುಳಿದ ಸಸಿಗಳಿಗೆ ಪ್ರೋತ್ಸಾಹಧನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಸ್ಥಳೀಯ ವಲಯದ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ನಿಗಧಿತ ವಿವರಗಳು ಹಾಗೂ ನೊಂದಾವಣೆ ಶುಲ್ಕ ರೂ.10 ಗಳ ಜೊತೆಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಜಮೀನಿನ ವಿವರಗಳಿರುವ ಪಹಣಿ ಕೈ ಬರಹದ ನಕ್ಷೆ, ಜಮೀನಿನ ಚೆಕ್ಕುಬಂದಿ ಹಾಗೂ ರೈತರು ಜಮೀನಿನಲ್ಲಿ ನೆಡಲು ಬೇಕಾಗಿರುವ ಸಸಿಗಳ ಜಾತಿ, ಅಳತೆ, ಸಂಖ್ಯೆಯ ವಿವರಗಳ ದಾಖಲೆಗಳನ್ನು ನೊಂದವಣೆಯ ಸಮಯದಲ್ಲಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ 1926 ಸಂಪರ್ಕಿಸಬಹುದಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
