ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನ

ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರಬೇಕು. ಅರ್ಜಿಯೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ರಹವಾಸಿ ಪ್ರಮಾಣ ಪತ್ರ, ಅಂಗವಿಕಲತೆ ಇದ್ದಲ್ಲಿ ದೃಢೀಕರಣ ಪತ್ರದೊಂದಿಗೆ ಸಲ್ಲಿಸಬೇಕು. ಮುಂದುವರಿಕೆ ಶಿಕ್ಷಣದಡಿಯಲ್ಲಿ ಪ್ರೇರಕ, ಉಪ ಪ್ರೇರಕರು ಮತ್ತು ಸಂಯೋಜಕರೆಂದು ಸೇವೆ ಸಲ್ಲಿಸಿದ್ದರೆ ಆಧ್ಯತೆ ನೀಡಲಾಗುತ್ತದೆ (ಪ್ರಮಾಣ ಪತ್ರ ಲಗತ್ತಿಸಬೇಕು). ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 7,000 ರೂ. ಗೌರವ ನೀಡಲಾಗುತ್ತದೆ. ಈ ನೇಮಕಾತಿಯು ಬೆಳಗಾವಿ ಜಿಲ್ಲೆಗೆ ಸೀಮಿತವಾಗಿದೆ.
ವಯೋಮಿತಿ: ಸಾಮಾನ್ಯ ವರ್ಗ 36 ವರ್ಷಗಳು, 2ಎ, 2ಬಿ, 3ಎ, 3ಬಿ 38 ವರ್ಷಗಳು, ಪ.ಜಾ, ಪ.ಪಂ, ಪ್ರವರ್ಗ-1 40 ವರ್ಷಗಳು.
ಅರ್ಜಿ ಸಲ್ಲಿಸುವ ವಿಳಾಸ: `ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಜಿಲ್ಲಾಕಾರಿಗಳ ಕಚೇರಿ ಆವರಣ, ಬೆಳಗಾವಿ’ ಈ ವಿಳಾಸಕ್ಕೆ ಸಲ್ಲಿಸಬೇಕು. ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆ ದಿನ.
ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ಮೀಸಲಾತಿ ವಿವರ:
ಚಿಕ್ಕೋಡಿ, ಬಂಬಲವಾಡ ಗ್ರಾಪಂ- ಸಾಮಾನ್ಯ ಹಾಗೂ ಮಹಿಳಾ ಅಭ್ಯರ್ಥಿ.
ಚಿಕ್ಕೋಡಿ, ಹಿರೇಕೋಡಿ ಗ್ರಾಪಂ- ಸಾಮಾನ್ಯ ಅಭ್ಯರ್ಥಿ.
ಬೆಳಗಾವಿ, ಹೊಸ ವಂಟಮೂರಿ ಗ್ರಾಪಂ- 2ಎ, ಮಹಿಳಾ ಅಭ್ಯರ್ಥಿ.
ಬೆಳಗಾವಿ, ಕಂಗ್ರಾಳಿ.ಬಿ.ಕೆ ಗ್ರಾಪಂ- ಸಾಮಾನ್ಯ ಅಭ್ಯರ್ಥಿ ಹಾಗೂ ಗ್ರಾಮೀಣ ಅಭ್ಯರ್ಥಿ.
ಸವದತ್ತಿ, ಚುಳಕಿ ಗ್ರಾಪಂ- ಪರಿಶಿಷ್ಟ ಜಾತಿ ಹಾಗೂ ಗ್ರಾಮೀಣ ಅಭ್ಯರ್ಥಿ.
ಖಾನಾಪುರ, ಕರಂಬಳ ಗ್ರಾಪಂ- ಪರಿಶಿಷ್ಟ ಜಾತಿ ಅಭ್ಯರ್ಥಿ.
ಗೋಕಾಕ, ಕುಲಗೋಡ ಗ್ರಾಪಂ- ಸಾಮಾನ್ಯ ಅಭ್ಯರ್ಥಿ ಹಾಗೂ ಮಹಿಳಾ ಅಭ್ಯರ್ಥಿ.
ಬೈಲಹೊಂಗಲ, ನೇಗಿನಹಾಳ ಗ್ರಾಪಂ- 2ಎ ಹಾಗೂ ಗ್ರಾಮೀಣ ಅಭ್ಯರ್ಥಿ.
ಹುಕ್ಕೇರಿ, ರುಸ್ತುಂಪುರ ಗ್ರಾಪಂ- ಸಾಮಾನ್ಯ ಅಭ್ಯರ್ಥಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿ.
ಬೈಲಹೊಂಗಲ, ಸಂಪಗಾಂವ ಗ್ರಾಪಂ- ಪ್ರವರ್ಗ-1.
ಗೋಕಾಕ, ಸುಣಧೋಳಿ ಗ್ರಾಪಂ- ಸಾಮಾನ್ಯ ಅಭ್ಯರ್ಥಿ ಹಾಗೂ ಮಹಿಳಾ ಅಭ್ಯರ್ಥಿ.

Sslc 64.64% gram panchayat Belavi-591309 Mob-9663550838