Select Page

ಫ್ಲೈಟ್‌ನಲ್ಲಿ ತಾಯಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಪೊಲೀಸ್

ಫ್ಲೈಟ್‌ನಲ್ಲಿ ತಾಯಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಪೊಲೀಸ್


ಹಾವೇರಿ: ಎಲ್ರೂ ಸಾಮಾನ್ಯವಾಗಿ ಪ್ರೇಯಸಿಗೊ, ಪ್ರೀಯತಮನಿಗೊ ಇಲ್ಲ ಹೆಂಡತಿಗೊ, ಗಂಡನಿಗೊ ಅದು ಇಲ್ಲ ಅಂದ್ರೆ, ಸ್ನೇಹಿತರಿಗಾಗಿ ವಿಶೇಷವಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡೋದನ್ನ ನೋಡಿರ್ತಿವಿ ಕೇಳಿರ್ತಿವಿ ಆದ್ರೆ ಇಲ್ಲೊಬ್ರು ತಮ್ಮ ತಾಯಿಯ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹನುಮಂತಪ್ಪ ಸುಂಕದ ತಮ್ಮ ತಾಯಿ ಪಾರ್ವತವ್ವ ಅವರ 63ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿಯ ಬರ್ತ್‌ಡೇ ಪ್ರಯುಕ್ತ ಇದೇ ಮೊದಲ ಬಾರಿ ತಂದೆ, ತಾಯಿ ಮತ್ತು ಮಗಳೊಂದಿಗೆ ಕಾನ್ಸ್‌ಟೇಬಲ್ ಹನುಮಂತಪ್ಪ, ವಿಮಾನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿಸಿದ್ದಾರೆ.

ಸದಾ ಕೃಷಿ ಕೆಲಸದಲ್ಲೇ ನಿರತರಾಗಿರುತ್ತಿದ್ದ ತಂದೆ ತಾಯಿಗಳನ್ನು ಕರೆದುಕೊಂಡು ವಿಮಾನ ಹತ್ತಿ, ಅಲ್ಲೇ ಕೇಕ್ ಕತ್ತರಿಸಿ ತಾಯಿಯ ಹುಟ್ಟುಹಬ್ಬ ಆಚರಿಸುವ ಮೂಲಕ ಹನುಮಂತಪ್ಪ ಸಂಭ್ರಮಿಸಿದರು.

Leave a reply

Your email address will not be published. Required fields are marked *