Select Page

ಮತ್ತೆ ಗ್ಯಾಸ್ ಟ್ಯಾಂಕರ್ ಅಪಘಾತ: ಮಗಳೊಂದಿಗೆ ಪ್ರಾಣ ಬಿಟ್ಟ ತಂದೆ

ಯಲ್ಲಾಪುರ: ಕುಮಟಾದಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಅಪಘಾತದ ಭಯ ಮಾಸುವ ಮೊದಲೇ ಯಲ್ಲಾಪುರದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.

ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಸ್ಕೂಟಿ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ತಂದೆ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನೋದ ಕಿಂದಳಕರ್ (57) ಹಾಗೂ ಅವರ ಮಗಳು ಸುನೇಹಾ ಕಿಂದಳಕರ್ (13) ಅಪಘಾತದಲ್ಲಿ ಮೃತರಾಗಿದ್ದಾರೆ.

ರಾತ್ರಿ ಪಾಳಿ ಕೆಲಸ ಮುಗಿಸಿ ತನ್ನ ಮಗಳನ್ನು ಯಲ್ಲಾಪುರದಿಂದ ಸ್ವಂತ ಊರಾದ ಅಂಕೋಲಾ ತಾಲ್ಲೂಕಿನ ಹಾರವಾಡಾಕ್ಕೆ ಬಿಡಲು ಹೊರಟಿದ್ದಾಗ ಟ್ಯಾಂಕರ್ ಡಿಕ್ಕಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a reply

Your email address will not be published. Required fields are marked *