ಸೂರ್ಯಾಸ್ತದೊಂದಿಗೆ ಜ್ಞಾನ ಯೋಗದ ಬೆಳಕು ಅಸ್ತಂಗತ…

ಸೂರ್ಯಾಸ್ತದೊಂದಿಗೆ ಜ್ಞಾನ ಯೋಗದ ಬೆಳಕು ಅಸ್ತಂಗತ…

ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಂತಿಮ ವಿಧಿ ವಿಧಾನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.

ನಗರದ ಸೈನಿಕ ಶಾಲೆಯಲ್ಲಿ ಶ್ರೀಗಳ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಶ್ರೀಗಳನ್ನ ಹೊತ್ತ ಗಾಡಿ ನಗರದ ಬೀದಿ ಬೀದಿಗಳಲ್ಲಿಯೂ ಸಾಗಿ ಬರುತ್ತಿದೆ. ಭಕ್ತರು ರಸ್ತೆಗಳ ಇಕ್ಕೆಲಗಳಲ್ಲಿಯೂ ನಿಂತು ಕೊನೆಯ ಬಾರಿ ಜ್ಞಾನದ ಬೆಳಕನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿಯೂ ಭಕ್ತಿರು ಶ್ರೀಗಳ ಕುರಿತು ಜಯಘೋಷ ಕೂಗುತ್ತಿದ್ದಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಶ್ರೀಗಳಿಗೆ ಅಶ್ರುತರ್ಪಣ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಅನೇಕ ಗಣ್ಯರು ಜ್ಞಾನ ಯೋಗಾಶ್ರಮದಲ್ಲಿ ಶ್ರೀಗಳ ವಿಧಿ ವಿಧಾನಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Leave a reply

Your email address will not be published. Required fields are marked *