ಬೆಂಗಳೂರು: new year ಸಂಭ್ರಮಾಚರಣೆಯಲ್ಲಿ ಭಾಗವಹಿಸೊ ಮದ್ಯ ಪ್ರಿಯರಿಗೆ ಪೊಲೀಸ್ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.

ಹೊಸ ವರ್ಷಕ್ಕೆ ಇನ್ನೇನು ಮೂರೇ ದಿನ ಬಾಕಿ ಉಳಿದಿದ್ದು, ಕಳೆದೆರಡು ವರ್ಷ ಮಹಾಮಾರಿ ಕೊರೊನಾ ಕಾರಣದಿಂದ new year ಸಂಭ್ರಮ ಆಚರಿಸಲು ಆಗಿಲ್ಲ. ಹೀಗಾಗಿ ಈ ವರ್ಷ ಸೆಲೆಬ್ರೆಟ್ ಮಾಡಲು ಬೆಂಗಳೂರಿಗರು ಬಹಳಷ್ಟು ಕಾತುರರಾಗಿದ್ದಾರೆ. ಹೀಗೆ ಸೆಲೆಬ್ರೆಷನ್ ಮೂಡಲ್ಲಿರೋ ಮಂದಿಗೆ ಪೊಲೀಸ್ ಇಲಾಖೆ ಆಂಬುಲೆನ್ಸ್ ಸೇವೆ ನೀಡಲು ಮುಂದಾಗಿದೆ.

ಆಂಬುಲೆನ್ಸ್ ಸೇವೆ ಯಾಕೆ ಅಂದ್ರಾ, ಅದ್ಕೆ ಕಾರಣ ಇಲ್ಲಿದೆ… ಸಿಲಿಕಾನ್ ಸಿಟಿಯಲ್ಲಿ ಪಾರ್ಟಿ ಅಂದ್ರೆ ಗೊತ್ತಲ್ಲ, ಮದ್ಯ ಪ್ರಿಯರೇ ಮುಂದಿರುತ್ತಾರೆ. ಹೀಗೆ ಕೆಂಪು ಪೂರ್ತಿ ಕುಡಿದು ಕುಣಿದಾಡೋ ಸಮಯದಲ್ಲಿ ಏನಾದ್ರೂ ಅಹಿತಕರ ಘಟನೆ ನಡೆದ್ರೆ ಅಥವಾ ಯಾರಿಗಾದರೂ ಆರೋಗ್ಯ ಸಮಸ್ಯೆಯಾದ್ರೆ ಚಿಕಿತ್ಸೆಗೆ ಅನುಕೂಲ ಆಗ್ಲಿ, ಅನ್ನೋ ದೃಷ್ಟಿಯಿಂದ ಪೊಲೀಸ್ ಇಲಾಖೆ ಆಂಬುಲೆನ್ಸ್ ಸೇವೆ ಮಾಡಲು ಮುಂದಾಗಿದೆ.

New Year ಸೆಲೆಬ್ರೆಷನ್ ಗಾಗಿ ಬೇರೆ ಕಡೆಗಳಿಂದ ಬ್ರಿಗೇಡ್ ರಸ್ತೆ, ಎಂಜಿ ರೋಡ್ ಹಾಗೂ ಕೋರಮಂಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹೀಗಾಗಿ ವಾಹನಗಳು ಮತ್ತು ಜನ ಸಂದಣಿ ಹೆಚ್ಚಿರುವ ಈ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿಗೆ ಅನುಗುಣವಾಗಿ ಆಂಬುಲೆನ್ಸ್ ಸೇವೆ ದೊರಕದೆ ಹೋಗಬಹುದು. ಅಂಥ ಸಮಯದಲ್ಲಿ ಸ್ಥಳದಲ್ಲೇ ಆಂಬುಲೆನ್ಸ್ ಇದ್ರೆ ಅನುಕೂಲವಾಗುತ್ತೆ, ಅನ್ನೋ ಕಾರಣದಿಂದ ಪೊಲೀಸ್ ಇಲಾಖೆ ಆಂಬುಲೆನ್ಸ್ ಸೇವೆ ಮಾಡಲು ಮುಂದಾಗಿದೆ.