Select Page

ಬಿಗ್ಗೆಸ್ಟ್ ಸೀಸನ್ 9ರ ಫಿನಾಲೆ ವಿನ್ನರ್ ರೂಪೇಶ್ ಶೆಟ್ಟಿ

ಬಿಗ್ಗೆಸ್ಟ್ ಸೀಸನ್ 9ರ ಫಿನಾಲೆ ವಿನ್ನರ್ ರೂಪೇಶ್ ಶೆಟ್ಟಿ

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ಆಟಕ್ಕೆ ಬ್ರೇಕ್ ಬಿದ್ದಿದ್ದು, ತುಳುನಾಡಿನ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ತುಳು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. ಗಿರಿಗಿಟ್ ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಈ ಚಿತ್ರದ ನಟನೆ ನೋಡಿಯೇ, ಬಿಗ್ ಬಾಸ್‌ಗೆ ಬರಲು ರೂಪೇಶ್ ಶೆಟ್ಟಿಗೆ ಅವಕಾಶ ಸಿಕ್ಕಿತ್ತು.

ಇದೇ ಮೊದಲ ಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ನಡೆಸಲಾಗಿತ್ತು. 42 ದಿನಗಳ ಮಿನಿ ಸೀಸನ್ ಅಂತಲೂ ಒಟಿಟಿ ಸೀಸನ್ ಅನ್ನು ಕರೆಯಲಾಗಿತ್ತು. ಒಟಿಟಿ ಸೀಸನ್ ನಲ್ಲಿ ಅತೀ ಹೆಚ್ಚು ಓಟುಗಳನ್ನು ಪಡೆದು ಮಿನಿ ಬಿಗ್ ಬಾಸ್ ಸೀಸನ್ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದರು.

ಅಲ್ಲಿಂದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಜೊತೆಯಾಗಿ ಟಿವಿ ಶೋ ಬಿಗ್ಬಾಸ್ ಸೀಸನ್ 9ಕ್ಕೆ ಕಾಲಿಟ್ಟರು. ಆದ್ರೆ ಇಂಡಿಜುವಲ್ ಆಗಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಬಿಗ್ಬಾಸ್ ಸೀಸನ್ 9 ಪ್ರತಿ ಬಾರಿಯಂತೆ ಈ ಸಲ ಅಷ್ಟೇನೂ ಸುಲಭವಾಗಿರಲಿಲ್ಲ. ಯಾಕಂದ್ರೆ ಈ ಸೀಸನ್ ನಲ್ಲಿ ನವೀನರು ಪ್ರವೀಣರು ಅಂದ್ರೆ ಈ ಮೊದಲು ಬಿಗ್ಬಾಸ್ ಶೋದಲ್ಲಿ ಇದ್ದ ಸ್ಪರ್ಧಿಗಳು, ಮೊದಲ ಬಾರಿಗೆ ಶೋ ಬಂದವರು ಸೇರಿ ಒಟ್ಟು 18 ಜನರ ಮಧ್ಯೆ ಗಟ್ಟಿ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು.

ಕೊನೆಗೂ ಟಾಪ್ 5 ಫೈನಲಿಸ್ಟ್‌ಗಳಲ್ಲಿ ಫಸ್ಟ್ ರನರ್ ಅಪ್ ಆದ ರಾಕೇಶ್ ಅಡಿಗ, ಸೆಕೆಂಡ್ ರನ್ನರ್ ಅಪ್ ಆದ ದೀಪಿಕಾ ದಾಸ್, ರೂಪೇಶ್ ರಾಜಣ್ಣ ಹಾಗೂ ದಿವ್ಯಾ ಉರುಡುಗ ಅವರಿಗೆ ಭಾರೀ ಪೈಪೋಟಿ ಕೊಟ್ಟು ರೂಪೇಶ್ ಶೆಟ್ಟಿ ಜಯಭೇರಿ ಬಾರಿಸಿದ್ದಾರೆ.

Leave a reply

Your email address will not be published. Required fields are marked *