ವೃಕ್ಷಗಳೆಂದರೇ ಅವು ಜೀವ ರಕ್ಷಕಗಳು, ಮರಗಳೇ ಇಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಯಾಕಂದ್ರೆ, ನಾವು ಉಸಿರಿನ ಮೂಲಕ ಬಿಡೊ ಇಂಗಾಲದ ಡೈಆಕ್ಸೈಡ್ ತೆಗೆದುಕೊಂಡು ನಮಗೆ ಅವಶ್ಯವಿರುವ ಆಮ್ಲಜನಕವನ್ನ ಬಿಡುಗಡೆ ಮಾಡಿ ಜೀವರಾಶಿಯನ್ನ ಕಾಪಾಡುತ್ತವೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದ್ರೆ ವಿಷಯ ಅದಲ್ಲ ಜೀವ ಕೊಡೋ ಅದೆ ಮರಗಳೇ ನಮ್ಮ ಪಾಲಿಗೆ ಯಮವಾದ್ರೆ, ವೃಕ್ಷಗಳಿಂದ ಬೀಸೊ ಗಾಳಿಯೇ ವಿಷವಾದ್ರೆ?.. ಹೌದು ವಿಷಗಾಳಿ ಉಗುಳೊ ಮರಗಳಿಂದ ಹಿಡಿದು, ಸ್ಪೋಟಗೊಳ್ಳೋ ಕಾಯಿಗಳನ್ನ ಬಿಡೊ ವರೆಗೆ ಲೋಹವನ್ನೆ ಕರಗಿಸಬಲ್ಲ ವೃಕ್ಷಗಳು ಈ ಜಗತ್ತಿನಲ್ಲಿ ಇವೆ ಅಂದ್ರೆ ನೀವು ನಂಬಲೇಬೇಕು.

ನಿಜ ಅಂತಹ ವಿಲಕ್ಷಣ, ವಿಚಿತ್ರ ಹಾಗೂ ಡೇಂಜರಸ್ ಮರಗಳು ಪಾಕಿಸ್ತಾನದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಮರಗಳನ್ನ ಘೋಸ್ಟ್ ಟ್ರೀ (Ghost tree) ಎಂದು ಕರೆಯಲಾಗುತ್ತೆ.

Ghost tree (ಘೋಸ್ಟ್ ಟ್ರೀ)

ಈ ರೀತಿ ಬಲಿಷ್ಟವಾದ ಬಿಳಿ ಪದರದಿಂದ ಮುಚ್ಚಿರೋ ಮರಗಳು ಜನರನ್ನ ಆಕರ್ಷಿಸುತ್ತವೆ. ಆ ಬಿಳಿ ಪದರ ಬೇರೆನು ಅಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ನೇರೆ ಹಾವಳಿ ಉಂಟಾದಾಗ ಜೀವ ಉಳಿಸಿಕೊಳ್ಳಲು ಈ ಮರಗಳ ಮೇಲೆ ಏರಿ ತಿಂಗಳಾನುಗಟ್ಟಲ್ಲೆ ಅಲ್ಲೆ ಇದ್ದು ತಮ್ಮ ಸಂತತಿ ಬೆಳೆಸುತ್ತವೆ. ಹೀಗೆ ಮರ ಸೇರಿದ ಜೇಡಗಳು ಬಲಿಷ್ಠವಾದ ಬಲೆ ಹೆಣೆಯುತ್ತವೆ.

ಈ ಬಲೆಗಳು ಹೇಗಿರುತ್ತೆ ಅಂದ್ರೆ, ಎಲೆ, ಹೂವು ಅಷ್ಟೆ ಯಾಕೆ ಕಾಯಿಗಳನ್ನೂ ಕೆಳಗೆ ಬೀಳದಂತೆ ಹಿಡಿದಿಟ್ಟುಕೊಳ್ಳುವಷ್ಟು ಭದ್ರವಾಗಿರುತ್ತದೆ. ಇಷ್ಟೆ ಅಲ್ಲ ಮನುಷ್ಯನನ್ನು ನಿಯಂತ್ರಿಸುವಷ್ಟು ಶಕ್ತಿಯುತವಾಗಿರುತ್ತವೆ ಎನ್ನಲಾಗುತ್ತದೆ.

2012ರಲ್ಲಿ ಪಾಕಿಸ್ತಾನದ ಕರಾಚಿಯ ಸ್ಥಳೀಯರು ಈ ಮರಗಳನ್ನ ನೋಡಿ ಭಯಗೊಂಡಿದ್ದರು. ಈ ವೃಕ್ಷಗಳು ದೂರದಿಂದ ನೋಡಲು ಮನಮೋಹನವಾಗಿಯೇ ಕಾಣುತ್ತವೆ. ಆದ್ರೆ ಈ ವೃಕ್ಷಗಳು ಜನರಿಗೆ ಪಾಸಿಟಿವ್ ಪರಿಣಾಮವನ್ನೆ ಬೀರಿವೆ. ಆ ಪ್ರದೇಶದ ಸುತ್ತಮುತ್ತಲಿನ ಸೊಳ್ಳೆಗಳನ್ನು ಭಾರೀ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತವೆ.

ಸ್ಯಾಂಡ್ ಬಾಕ್ಸ್ ಟ್ರೀ
ಸ್ಯಾಂಡ್ ಬಾಕ್ಸ್ ಟ್ರೀ ಹೆಸರಿನ ಮರಗಳ ಕಾಂಡ ಮುಳ್ಳುಗಳಿಂದ ಕೂಡಿರುತ್ತವೆ. ಮುಳ್ಳುಗಳು ಬಹಳ ಗಟ್ಟಿ ಹಾಗೂ ಚೂಪಾಗಿ ತ್ತವೆ. ಹೀಗಾಗಿ ಮನುಷ್ಯ ಸೇರಿದಂತೆ ಯಾವುದೇ ಪ್ರಾಣಿಗಳು ಸಹ ಮರದ ಮೇಲೆ ಏರಲು ಸಾಧ್ಯವಾಗುವುದಿಲ್ಲ. ಇವುಗಳಿಂದ ಜನರಿಗೆ ಕಟ್ಟಿಟ್ಟಬುತ್ತಿ.

ಸ್ಯಾಂಡ್ ಬಾಕ್ಸ್ ಟ್ರೀ (sandbox tree)

ಈ ಮರದ ಕಾಂಡಗಳಷ್ಟೆ ಇದರ ಭಯಾನಕತೆ ಹೆಚ್ಚಿಸಿಲ್ಲ. ಇದರ ಕಾಯಿಗಳು ಯಾವುದೇ ವಸ್ತುವಿನ ಸಮೀಪ ಬಂದ್ರೆ ಹಠಾತ್ತನೆ ಸ್ಪೋಟಗಳ್ಳುವ ಗುಣ ಹೊಂದಿವೆ. ಇದರ ಕಾಯಿಗಳು ಬಲಿತಾಗ ತಾವಾಗಿಯೇ ಸ್ಪೋಟಗೊಳ್ಳುತ್ತವೆ.

ಹೀಗೆ ಸಿಡಿಯುವ ಕಾಯಿಗಳ ಕವಚ (ಸಿಪ್ಪೆ) ಹಾಗೂ ಬೀಜಗಳ ಹೊಡೆತಕ್ಕೆ ಜನರಿಗೆ ಗಂಭೀರ ಗಾಯಗಳಾಗೊ ಅಪಾಯವಿರುತ್ತೆ. ಈ ಮರಗಳು ಅಮೇರಿಕ ಹಾಗೂ ಆಫ್ರೀಕಾದ ತಾಂಜೆನಿಯಾ ಎಂಬಲ್ಲಿ ಕಂಡು ಬರುತ್ತವೆ.

ಮಾಂಚಿನೀಲ್ ಟ್ರೀ(manchineel tree)

ಮಾಂಚಿನೀಲ್ ಟ್ರೀ ಈ ಮರದ ಸೂತ್ತಲೂ ಕೆಂಪು ಪಟ್ಟಿ ಹಾಕಿದ್ರೆ, ಅದು ಡೇಂಜರ್ ಅನ್ನೋ ಸೂಚನೆ ಅಂತ ತಿಳಿಯಬೇಕು. ಈ ರೀತಿ ಕೆಂಪು ಪಟ್ಟಿ ಬರೆದ ಮರ ಕಂಡಾಗ ನಾವು ಅದರಿಂದ ದೂರ ಇರಲೇಬೇಕು. ಈ ವೃಕ್ಷದ ಪ್ರತಿ ಭಾಗವೂ ವಿಷಪೂರಿತವಾಗಿರುತ್ತದೆ.

ಇದರ ಎಲೆ, ಕಾಂಡ, ಹಣ್ಣುಗಳು ವಿಷಕಾರಿ ಆಗಿದ್ದು, ಅವು ಪ್ರಾಣಿಗಳು ಸೇರಿದಂತೆ ಮನುಷ್ಯರನ್ನು ಅಕ್ಷರಶಃ ಕೊಲ್ಲುತ್ತವೆ. ಈ ಮರದ ಎಲ್ಲಾ ಭಾಗಗಳಲ್ಲೂ ಕೊಳ್ಳಿ ಹಾಲಿನ ರೀತಿ ಕಾಣುವ ವೈಟ್ ಲೀಕ್ವಿಡ್ (ಬಿಳಿ ರಸ) ಹೊರಬರುತ್ತದೆ.

ಇದು ಮನುಷ್ಯನ ಮೈಮೇಲೆ ಬಿದ್ದರೆ ಚರ್ಮ ಮೇಲ್ಟ್(ಕರಗಿಸಬಹುದು) ಆಗಬಹುದು. ಬರೀ ಚರ್ಮವನ್ನಷ್ಟೆ ಅಲ್ಲ ಲೋಹವನ್ನೆ ಕರಗಿಸಬಲ್ಲ ಶಕ್ತಿಶಾಲಿ ಲಿಕ್ವಿಡ್. ಕೆಲವರು ಈ ಮರದ ಹಣ್ಣನ್ನು ಗೊತ್ತಿಲ್ಲದ ತಿಂದಿರುವುದು ಉಂಟು. ತಿಂದ ಬಳಿಕ ಏನಾಯ್ತು ಅಂತ ಹೇಳಲು ಅವರು ಬದುಕಿರುವುದೇ ಇಲ್ಲ.

manchineel tree (ಮಾಂಚಿನೀಲ್ ಮರ)

ಹೌದು ಈ ಹೆಣ್ಣು ತಿಂದ ಕೆಲ ಹೊತ್ತಲ್ಲೆ ಮನುಷ್ಯನ ಹೃದಯದ ರಕ್ತನಾಳಗಳನ್ನು ಬ್ಲಾಕ್ ಮಾಡುತ್ತದೆ. ಇದರಿಂದ ಸಾವು ಸಂಭವಿಸುತ್ತದೆ. ಇಷ್ಟು ಮಾತ್ರವಲ್ಲ ಮಳೆ ಬರುವಾಗ ಈ ವೃಕ್ಷದ ಕೆಳಗೆ ನಿಲ್ಲುವ ಹಾಗಿಲ್ಲ. ಕಾರಣ ಮಳೆ ಹನಿಗಳ ಜೊತೆಗೆ ಈ ಮರದಲ್ಲಿರುವ ಲಿಕ್ವಿಡ್ ಅಂಶ ಸೇರಿಕೊಂಡು ಮೈ ಮೇಲೆ ಬಿದ್ರೆ, ಅಪಾಯ ಗ್ಯಾರಂಟಿ. ಇನ್ನು ಈ ಮರಗಳು ಉತ್ತರ ಅಮೇರಿಕದ ದಕ್ಷಿಣ ಭಾಗಗಳಲ್ಲಿ ಹಾಗೂ ಸೆಂಟ್ರಲ್ (ಮಧ್ಯೆ) ಅಮೇರಿಕದ ಕಾಡುಗಳಲ್ಲಿ ಕಾಣ ಸಿಗುತ್ತವೆ.