ಪುರುಷ, ಮಹಿಳಾ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಚಾಲನೆ

ಪುರುಷ, ಮಹಿಳಾ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಚಾಲನೆ

ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ದಿನಕ್ಕೊಂದು ಪ್ರಕಟಣೆ ಹೊರಡಿಸುತ್ತಿದೆ. ಪೊಲೀಸ್ ಇಲಾಖೆ ಸೇರಬಯಸುವ ಪುರುಷ, ಮಹಿಳೆಯರಿಗೆ ಭರ್ಜರಿ ಅವಕಾಶದ ಬಾಗಿಲು ತೆರೆದಿದೆ. 4014 ನಾಗರೀಕ ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಚಾಲನೆ ನೀಡಿದೆ. ಅದರಲ್ಲಿ 1002 ಹುದ್ದೆಗಳು ಹೈದರಾಬಾದ್ ಕರ್ನಾಟಕಕ್ಕೆ ಮೀಸಲಾಗಿದೆ. ಆ ಕುರಿತು ಪೊಲೀಸ್ ಇಲಾಖೆ ಜಾಹೀರಾತು ಸಹ ಪ್ರಕಟಿಸಿದೆ.

ಅರ್ಜಿ ಸಲ್ಲಿಸಿ: ಸಿವಿಲ್ ಪಿಎಸ್ಐ 556 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಈಚೆಗಷ್ಟೇ ಸಿಆರ್ ಪಿಎಫ್ ಕಾನ್ ಸ್ಟೆಬಲ್, ವಿವಿಧ ವಿಭಾಗದ ಸಬ್ ಇನ್ ಸ್ಪೆಕ್ಟರ್ ನೇಮಕಾತಿಗೆ ಚಾಲನೆ ನೀಡಿತ್ತು. ಈಗ ಸಿವಿಲ್ ವಿಭಾಗದಲ್ಲಿ ಪಿಎಸ್ಐ, ಹಾಗೂ ಕಾನ್ ಸ್ಟೆಬಲ್ ನೇಮಕಾತಿಗೂ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಿ: 162 PSI ಹುದ್ದೆ ಭರ್ತಿ ಅರ್ಜಿ ಆಹ್ವಾನ

ಹುದ್ದೆ ಮಾಹಿತಿ
ನಾಗರೀಕ ಪೊಲೀಸ್ ಕಾನ್ ಸ್ಟೆಬಲ್ (ಪುರುಷ ಮತ್ತು ಮಹಿಳೆ)- 2565 ಹುದ್ದೆಗಳು.
ಸಶಸ್ತ್ರ ಪೊಲೀಸ್ ಕಾನ್ ಸ್ಟೆಬಲ್ (ಸಿಎಆರ್/ ಡಿಎಆರ್)- 1449 ಹುದ್ದೆಗಳು.

ಪರೀಕ್ಷೆ ಇಲ್ಲದೆ ನೇಮಕಾತಿ: ಪಂಚಾಯತ್ ರಾಜ್ ಇಲಾಖೆ 417 ಹುದ್ದೆ

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು www.ksp.gov.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

KSRP: 2672 ಪೊಲೀಸ್ ಕಾನ್ ಸ್ಟೆಬಲ್ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 20/05/2020.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 22/06/2020

ಮತ್ತಷ್ಟು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರದ ಪ್ರಕಟಣೆ

1 Comment

  1. Praveen

    Civil police Constable
    Application

    Reply

Leave a reply

Your email address will not be published. Required fields are marked *