Select Page

ರೈಲ್ವೆ ರಕ್ಷಣಾ ಪಡೆ 19952 ಕಾನ್ ಸ್ಟೆಬಲ್ ನೇಮಕಾತಿ ಸುಳ್ಳು- ರೈಲ್ವೆ ಇಲಾಖೆ ಹೇಳಿದ್ದೇನು?

ರೈಲ್ವೆ ರಕ್ಷಣಾ ಪಡೆ 19952 ಕಾನ್ ಸ್ಟೆಬಲ್ ನೇಮಕಾತಿ ಸುಳ್ಳು- ರೈಲ್ವೆ ಇಲಾಖೆ ಹೇಳಿದ್ದೇನು?

ರೈಲ್ವೆ ರಕ್ಷಣಾ ಪಡೆಯಲ್ಲಿ (RPF) 19952 ಕಾನ್ ಸ್ಟೆಬಲ್ ಹುದ್ದೆಗಳ ನೇಮಕಾತಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಇಂಥ ಸುದ್ದಿಗಳನ್ನು ಅಭ್ಯರ್ಥಿಗಳು ನಂಬ ಬಾರದು ಎಂದು ಇಲಾಖೆ ಎಚ್ಚರಿಸಿದೆ.

ಈ ಕುರಿತು ಭಾರತೀಯ ರೈಲ್ವೆ ಇಲಾಖೆಯು ಎಚ್ಚರಿಕೆ ಪ್ರಕಟಣೆ ಹೊರಡಿಸಿದೆ. ಅದರಲ್ಲಿ ತಿಳಿಸಿರುವಂತೆ “ಕೆಲವು ದಿನಗಳ ಹಿಂದಿನಿಂದ ಕೆಲ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ 19,952 ಕಾನ್‌ಸ್ಟೆಬಲ್ ಹುದ್ದೆಗಳನ್ನು ನೇಮಕಾತಿ ಮಾಡಲಿದೆ ಎಂದು ಹರಿದಾಡುತ್ತಿರುವ ಮಾಹಿತಿ ಸುಳ್ಳು.

ಆರ್‌ಪಿಎಫ್‌ ಅಥವಾ ರೈಲ್ವೆ ಸಚಿವಾಲಯದಿಂದ ಈ ರೀತಿಯ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿಲ್ಲ. ಅಂಥ ಯಾವುದೇ ನೇಮಕಾತಿ ಅಧಿಸೂಚನೆ ಇದ್ದರೆ ಅದು ರೈಲ್ವೆ ನೇಮಕಾತಿ ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಅಂಥ ನೋಟಿಪಿಕೇಶನ್ ಗಳನ್ನು ಮಾತ್ರ ನಂಬಬೇಕು,” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ಇಲಾಖೆ ಪ್ರಕಟಣೆ ಪ್ರತಿ ವೀಕ್ಷಿಸಲು ಕ್ಲಿಕ್ ಮಾಡಿ.

Leave a reply

Your email address will not be published. Required fields are marked *