Categories: Agriculture

ಬೆಳೆ ನುಂಗುವ ಶಂಕು ಹುಳು ನಿಯಂತ್ರಿಸುವ ಕ್ರಮಗಳು

ಪ್ರಾಣಿ ಪ್ರಪಂಚದ ಕೀಟಗಳ ನಂತರ ಅತೀ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಶಂಕು ಹುಳುಗಳು ಮಣ್ಣು ಹಾಗೂ ನೀರಿನಲ್ಲಿ ವಾಸವಾಗಿರುತ್ತವೆ. ತರಕಾರಿ, ನೆಡುತೋಪು ಬೆಳೆಗಳು, ಅರಣ್ಯ ಹಾಗೂ ಹೊಲದ ಬೆಳೆಗಳನ್ನು ತಿಂದು ನಾಶ ಮಾಡುತ್ತಿರುತ್ತವೆ. ಈ ಹುಳುವಿನ ಚಟುವಟಿಕೆ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಹೆಚ್ಚಿರುತ್ತದೆ.

ಹಗಲಿನ ವೇಳೆಯಲ್ಲಿ ಎಲೆ ಮತ್ತು ಕಲ್ಲುಗಳ ಕೆಳಗೆ ಅವಿತುಕೊಳ್ಳುತ್ತವೆ. ರಾತ್ರಿಯ ವೇಳೆ ಫ್ರೌಢಾವಸ್ಥೆಯ ಹುಳುಗಳು ಹೊರಬಂದು ಹಣ್ಣು ಮತ್ತು ತರಕಾರಿಗಳನ್ನು ತಿಂದು ಹಾನಿ ಮಾಡುತ್ತವೆ. ಕೆಲವೊಮ್ಮೆ ತುಂತುರು ಮಳೆ ಹಾಗೂ ಮಂದ ಸೂರ್ಯನ ಪ್ರಕಾಶದಲ್ಲಿ ಹಗಲಿನ ವೇಳೆಯಲ್ಲೂ ಇವುಗಳ ಬಾಧೆಯನ್ನು ಕಾಣಬಹುದು.

ನಿರ್ವಹಣೆ ಮಾಡುವುದು ಹೇಗೆ?

ತೋಟದಲ್ಲಿ ಕಳೆಗಿಡಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡುವುದು. ಪ್ರಾರಂಭದ ಹಂತಗಳಲ್ಲಿ ಹುಳುಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಸುಣ್ಣ ಸಿಂಪಡಿಸುವುದರಿಂದ ನಾಶಪಡಿಸಬಹುದು. ಹಸಿ ಗೋಣಿ ಚೀಲಗಳನ್ನು ತೋಟದಲ್ಲಿ ಅಲ್ಲಲ್ಲಿ ಇಡುವುದರಿಂದ ಹುಳುಗಳು ಚೀಲದ ಕೆಳಗೆ ಅವಿತುಕೊಳ್ಳುತ್ತವೆ. ಹೀಗೆ ಸಂಗ್ರಹಿಸಿದ ಹುಳುಗಳನ್ನು ಉಪ್ಪು ಅಥವಾ ಕಾಪರ್ ಸಲ್ಫೇಟ್ ಹಾಕಿ ನಾಶಪಡಿಸಬಹುದು.

ರಾಸಾಯನಿಕವಾಗಿ ನಿಯಂತ್ರಿಸಿ

ಮೆಟಾಲ್ಡಿಹೈಡ್ ರಾಸಾಯನಿಕ ಪೀಡೆನಾಶಕದ ಸಣ್ಣ ತುಣುಕುಗಳನ್ನು ಹೊಲದಲ್ಲಿ ಅಲ್ಲಲ್ಲಿ ಚೆಲ್ಲಿದಾಗ ಹುಳುಗಳು ಆಕರ್ಷಣೆಗೊಂಡು ಕೀಟನಾಶಕಗಳನ್ನು ತಿನ್ನುವುದರಿಂದ ಹುಳುಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಓದಿ: ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್: ಕೇಂದ್ರಕ್ಕೆ ಪ್ರಸ್ತಾವ

ಎಚ್ಚರಿಕೆ ಇರಲಿ

ಯಾವುದೇ ರಾಸಾಯನಿಕದಿಂದ ಈ ಹುಳುಗಳು ಸತ್ತಿದ್ದು ಕಂಡುಬಂದಲ್ಲಿ ತಕ್ಷಣ ಅವುಗಳನ್ನು ಆರಿಸಿ ಆಳವಾಗಿ ನೆಲದಲ್ಲಿ ಹೂಳಬೇಕು. ಇಲ್ಲದಿದ್ದರೆ ಸಾಕು ಪ್ರಾಣಿಗಳು ಹೀಗೆ ಸತ್ತಿರುವ ಶಂಕುಹುಳುಗಳನ್ನು ತಿನ್ನುವುದರಿಂದ ಅವುಗಳಿಗೆ ತೊಂದರೆಯಾಗಬಹುದು.

ಓದಿ: ಈರುಳ್ಳಿಗೆ ಹಳದಿ ರೋಗ ಬಂದರೆ ಏನು ಮಾಡಬೇಕು?

ಶಂಕುಹುಳಗಳು ನಿಸರ್ಗದಲ್ಲಿ ಶೇ.75 ರಿಂದ 80 ರಷ್ಟು ತಮ್ಮ ಆಹಾರವನ್ನು ಕೊಳೆಯುತ್ತಿರುವ ಪ್ರಾಣಿ ಮತ್ತು ಸಸ್ಯಜನ್ಯ ಪದಾರ್ಥಗಳನ್ನು ತಿಂದು ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡುತ್ತವೆ. ಇಂತಹ ಸಂದರ್ಭದಲ್ಲಿ ಬೆಳೆಗಳ ಮೇಲೆ ಹಾವಳಿಯಿದ್ದಾಗ ಮಾತ್ರ ಹತೋಟಿ ಕ್ರಮ ಕೈಗೊಂಡು ನಿಸರ್ಗದ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ಓದಿ: ಯೂರಿಯಾ ಬಳಸುವ ಮುನ್ನ ಎಚ್ಚರ: ವಿಜ್ಞಾನಿಗಳ ಸಲಹೆ ಏನು?

ಹೆಚ್ಚಿನ ಮಾಹಿತಿಗೆ ಮಂಗಳೂರಿನ ತೋಟಗಾರಿಕೆ ವಿಷಯತಜ್ಞ ರಿಶಲ್ ಡಿಸೋಜ ಅವರ ದೂರವಾಣಿ ಸಂಖ್ಯೆ 8277806372 ಸಂಪರ್ಕಿಸಬಹುದು.

admin

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

4 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

1 year ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago