Categories: job corner

ಪ್ರವಾಸೋದ್ಯಮ ಇಲಾಖೆ: ಮ್ಯಾನೇಜರ್, ಕುಕ್, ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು ಆನ್ ಲೈನ್ ನಲ್ಲಿ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಯಾವುದೇ ಅರ್ಜಿ ಶುಲ್ಕ ಇಲ್ಲ. ಅದಕ್ಕೆ ಬೇಕಾದ ಮಾಹಿತಿಯ ವಿವರಣೆಯನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳು ಮತ್ತು ವಿದ್ಯಾರ್ಹತೆ
ಸಹಾಯಕ ವ್ಯವಸ್ಥಾಪಕರು- ಹೋಟೆಲ್ ನಿರ್ವಹಣೆ ಡಿಪ್ಲೊಮಾ.
ಸ್ವಾಗತಕಾರರು-  ಹೋಟೆಲ್ ನಿರ್ವಹಣೆ ಡಿಪ್ಲೊಮಾ.
ಉಗ್ರಾಣಿಕರು-  ಪಿಯುಸಿ ಅಥವಾ ತತ್ಸಮಾನ.
ದ್ವಿತೀಯ ದರ್ಜೆ ಲೆಕ್ಕ ಸಹಾಯಕರು/ ಬಿಲ್ ಕ್ಲರ್ಕ್, ಕ್ಯಾಷಿಯರ್- ಬಿಕಾಂ ಅಥವಾ ಬಿಬಿಎಂ.
ಅಡುಗೆಯವರು- 10ನೇ ತರಗತಿ ಮತ್ತು ಆಹಾರ ನಿರ್ವಹಣೆ ಸಂಬಂಧಿಸಿದ ಸಿರ್ಟಿಪಿಕೇಟ್ ಕೋರ್ಸ್.
ಸಹಾಯಕ ಅಡುಗೆಯವರು- 10ನೇ ತರಗತಿ ಮತ್ತು ಆಹಾರ ನಿರ್ವಹಣೆ ಸಂಬಂಧಿಸಿದ ಸಿರ್ಟಿಪಿಕೇಟ್ ಕೋರ್ಸ್.
ಅಡುಗೆ ಸಹಾಯಕರು- 7ನೇ ತರಗತಿ.
ಮಾಣಿ- 7ನೇ ತರಗತಿ.
ರೂಂ ಬಾಯ್- 7ನೇ ತರಗತಿ.
ಗಾರ್ಡನರ್- 7ನೇ ತರಗತಿ.
ಸಾಮಾನ್ಯ ಉಪಯೋಗಿ ಕೆಲಸಗಾರರು- 7ನೇ ತರಗತಿ.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ https://www.kstdc.co/notifications/ ವಿಳಾಸ ತೆರೆದು ಅದರಲ್ಲಿರುವ ಅರ್ಜಿ ನಮೂನೆ ಡೌನ್ ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಭರ್ತಿ ಮಾಡಿ ಪ್ರವಾಸೋದ್ಯ ಇಲಾಖೆಗೆ ಸಲ್ಲಿಸಬೇಕು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-43344334ಗೆ ಕರೆ ಮಾಡಬಹುದು.

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಳಾಸ:
ವ್ಯವಸ್ಥಾಪಕರು (ಆಡಳಿತ) ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ., ಕಾರ್ಯನಿರ್ವಾಹಕ ಕಛೇರಿ, ನೆಲಮಹಡಿ, ಯಶವಂತಪುರ ಟಿಟಿಎಂಸಿ, ಬಿ.ಎಂ.ಟಿ.ಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ, ಬೆಂಗಳೂರು-560 022.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:  20.03.2020.

ಅರ್ಜಿ ನಮೂನೆ ಪಡೆಯಲು ಕ್ಲಿಕ್ ಮಾಡಿ Click Hear

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

ವಿಶೇಷ ಸೂಚನೆ:
* ಅಭ್ಯರ್ಥಿಗಳು ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸ್ಪೀಡ್/ಪೋಸ್ಟ್/ರಿಜಿಸ್ಟರ್ ಪೋಸ್ಟ್/ ಕೋರಿಯರ್ ಅಥವಾ ನೇರವಾಗಿ ಮೇಲೆ ತಿಳಿಸಿದ ವಿಳಾಸಕ್ಕೆ ಬಂದು ಸಲ್ಲಿಸಬಹುದಾಗಿದೆ.
* ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ/ಪೋಸ್ಟ್ ಕವರ್‍ನ ಮೇಲೆ ನಮೂದಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
* ದಿನಾಂಕ: 20.03.2020 ರ ನಂತರದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
* ನಿಗಮವು ನೀಡಿರುವ ನಮೂನೆಯಲ್ಲದೇ, ಇತರೆ ಯಾವುದೇ ನಮೂನೆಯಲ್ಲಿ ಸ್ವವಿವರವನ್ನು ಸಲ್ಲಿಸಿದರೆ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
* ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.  

ಗಮನಿಸಿ: ಮತ್ತಷ್ಟು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ

admin

Recent Posts

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

3 months ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

1 year ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

1 year ago

ನಿತ್ಯ ಬೆಳ್ಳುಳ್ಳಿ ಸೇವಿಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು

ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಲವು ವಿಧದ ಔಷಧೀಯ ಗುಣಗಳೂ ಇದರಲ್ಲಿ ಕಂಡುಬರುತ್ತವೆ. ಆಹಾರದ ರುಚಿಯನ್ನು…

1 year ago

ಸ್ಯಾಂಡಲ್ ವುಡ್ ಕ್ಯೂಡ್ ಜೋಡಿ ಸಿಂಹಪ್ರಿಯ ಅರಿಶಿನ ಶಾಸ್ತ್ರದ ಫೋಟೋಸ್

ಸ್ಯಾಂಡಲ್​ವುಡ್​​ ಕ್ಯೂಡ್​ ಜೋಡಿಗಳಲ್ಲಿ ಒಂದಾದ ಸಿಂಹಪ್ರಿಯರ ಕಲ್ಯಾಣಕ್ಕೆ ಮುಹೂರ್ತ ಕೌಂಟ್‌ಡೌನ್ ಶುರುವಾಗಿದ್ದು, ಇಂದು ಅರಿಶಿನ ಶಾಸ್ತ್ರ ನೆರವೇರಿದೆ. ಅರಿಶಿನ ಶಾಸ್ತ್ರದ…

1 year ago

ಖಾಕಿ ಕಣ್ತಪ್ಪಿಸಲು 20kg ತೂಕ ಇಳಿಸಿದ್ದ ಕಳ್ಳ: ಕನ್ಫ್ಯೂಸ್ ಆದ ಪೊಲೀಸ್ರು ಮುಂದೆನಾಯ್ತು..?

ಬೆಂಗಳೂರು: ಸಿನಿಮಾಗಾಗಿ ತೂಕ ಇಳಿಸುವುದು, ಪಿಟ್ ಆಗಿ ಕಾಣಿಸಲು ವರ್ಕ್ ಔಟ್ ಮಾಡಿ ಸಣ್ಣ ಆಗೋದು ಇವೆಲ್ಲ ಕಾಮನ್. ಆದ್ರೆ,…

1 year ago