Categories: Yoga

ರೋಗನಿರೋಧಕ ಶಕ್ತಿ ಹೆಚ್ಚಿಸಲು ಯೋಗಾಭ್ಯಾಸ

ಇವತ್ತಿನ ದಿನಗಳಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗದಂತೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಅತ್ಯವಶ್ಯಕವಾಗಿದೆ.

ಉತ್ತಮ ಆಹಾರ ಸೇವಿಸುವುದು ಮತ್ತು ದೇಹಕ್ಕೆ ವ್ಯಾಯಾಮ ಮಾಡುವುದರ ಮೂಲಕ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳವಾದ ಯೋಗಾಸನ ಇಲ್ಲಿದೆ.

1) ವಜ್ರಾಸನ:

ಎರಡು ಕಾಲುಗಳನ್ನು ಮುಂದೆ ಚಾಚಿ ನೇರವಾಗಿ ಕುಳಿತುಕೊಳ್ಳಿ. ಬಲ ಮಂಡಿಯನ್ನು ಮಡಚಿ ಬಲ ಪ್ರಷ್ಠದ ಬದಿಗಿರಿಸಿ. ನಂತರ ಎಡ ಮಂಡಿ ಮಡಚಿ ಎಡ ಪ್ರಷ್ಠದ ಬದಿಗಿರಿಸಿ. ಸಂಪೂರ್ಣ ದೇಹದ ಭಾರವನ್ನು ಹಿಮ್ಮಡಿಯ ಮೇಲಿರಿಸಿ. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ, ಹಸ್ತಗಳು ಮಂಡಿಯ ಮೇಲಿರಿಸಿ ಕೈಗಳು ನೇರವಾಗಿರಲಿ. ಇದೇ ಭಂಗಿಯಲ್ಲಿ ಕನಿಷ್ಠ 60 ಸೆಕೆಂಡುಗಳ ಕಾಲ ಇದ್ದು, ನಂತರ ಕಾಲುಗಳನ್ನು ಮುಂದೆ ಚಾಚಿ ವಿಶ್ರಾಂತಿ ತೆಗೆದುಕೊಳ್ಳಿ.

2) ಪಶ್ಚಿ ಮೊತ್ತಾಸನ:

ಕಾಲುಗಳನ್ನು ಮುಂದೆ ಚಾಚಿ ಬೆನ್ನು ನೇರವಾಗಿಸಿ ಕುಳಿತುಕೊಳ್ಳಿ. ಎರಡು ಹಸ್ತ ಪ್ರಷ್ಠದ ಬದಿಗಿರಲಿ. ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ತಲೆಯ ಮೇಲಕ್ಕೆತ್ತಿ. ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಭಾಗಿ ಪಾದದ ಹೆಬ್ಬೆರಳನ್ನು ಹಿಡಿದುಕೊಳ್ಳಿ ನಿಮ್ಮ ಹಣೆ ಅಥವಾ ಗದ್ದ ಮಂಡಿಗೆ ತಾಗಿಸಲು ಪ್ರಯತ್ನಿಸಿ.

ಉಸಿರಾಟ ಸಹಜವಾಗಿರಲಿ. ಇದೇ ಭಂಗಿಯಲ್ಲಿ ಕನಿಷ್ಠ 10 ಸೆಕೆಂಡುಗಳ ಕಾಲ ಇರಿ ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿ ಹಾಗೆ ಉಸಿರನ್ನು ಹೊರ ಹಾಕುತ್ತಾ ಕೈಗಳನ್ನು ಕೆಳಗಿಳಿಸಿ ವಿಶ್ರಾಂತಿ ತೆಗೆದುಕೊಳ್ಳಿ.

3) ಪಾದಹಸ್ತಾಸನ:

ತಾಡಾಸನ ಸ್ಥಿತಿಯಲ್ಲಿ ನೇರವಾಗಿ ನಿಂತುಕೊಳ್ಳಿ. ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ಹಾಗೆ ಉಸಿರನ್ನು ಹೊರ ಹಾಕುತ್ತಾ ಸೊಂಟದ ಭಾಗದಿಂದ ಮುಂದಕ್ಕೆ ಬಾಗಿ. ನಿಮ್ಮ ಎರಡು ಹಸ್ತಗಳು ಪಾದದ ಬದಿಗಿರಿಸಿ ಹಣೆಯನ್ನು ಮಂಡಿಗೆ ತಾಗಿಸಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ 10-15 ಸೆಕೆಂಡುಗಳ ಕಾಲ ಇದ್ದು ನಂತರ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ  ಮೇಲಕ್ಕೆ ಬಂದು ಉಸಿರನ್ನು ಹೊರ ಹಾಕುತ್ತಾ ಕೈಗಳನ್ನು ಕೆಳಗಿಳಿಸಿ ವಿಶ್ರಾಂತಿ ತೆಗೆದುಕೊಳ್ಳಿ.

ಇದನ್ನೂ ಓದಿ: ಯೋಗ ಆರಂಭಿಸುವುದು ಹೇಗೆ?

admin

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

4 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

1 year ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago