Categories: Yoga

ಕೂದಲು ಉದುರುವುದನ್ನು ತಡೆಯಲು ಸರ್ವಾಂಗಾಸನ

ಸರ್ವಾಂಗಾಸನ “ಆಸನಗಳ ತಾಯಿ” ಎಂತಲೂ ಕರೆಯುತ್ತಾರೆ. ಶರೀರದ ಸರ್ವಾಂಗಗಳಿಗೆ ಆರೋಗ್ಯವನ್ನು ನೀಡುವಂತ ಉತ್ತಮ ಆಸನ.

ಮಾಡುವ ವಿಧಾನ:

1) ಕಾಲುಗಳನ್ನು ನೀಳವಾಗಿ ಮುಂದೆ ಚಾಚಿ ಬೆನ್ನು ಕೆಳಗೆಮಾಡಿ ಶವಾಸನದಲ್ಲಿ ಮಲಗಿ, ಕೈಗಳು ತೊಡೆಯ ಪಕ್ಕ ಸಲ್ಲಿರಿಸಿ, ಹಸ್ತ ಮೇಲ್ಮುಖವಾಗಿ ಇರಲಿ.

2) ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಕಾಲುಗಳನ್ನು ಮತ್ತು ಸೊಂಟವನ್ನು ನಿಧಾನವಾಗಿ ಮೇಲಕ್ಕೆತ್ತಿ ತಲೆ ಇರುವ ದಿಕ್ಕಿನತ್ತ ಚಾಚಿ.

3) ಕೈಗಳನ್ನು ಸೊಂಟಕ್ಕೆ ಆಧಾರವಾಗಿರಿಸಿ ಕಾಲುಗಳನ್ನು 90 ಡಿಗ್ರಿ ಅಂಶ ಕೋನದಲ್ಲಿ ಮೇಲಕ್ಕೆ ನೇರವಾಗಿ ನಿಲ್ಲಿಸಿ.

4) ತೊಡೆ , ಮೀನಖಂಡ, ಪಾದ ಒಂದೇ ಸರಳ ರೇಖೆಯಲ್ಲಿರುವಂತೆ ನೋಡಿಕೊಳ್ಳಿ. ಎದೆಯನ್ನು ಹಿಗ್ಗಿಸಿ ಗದ್ದಕ್ಕೆ ತಾಗುವಂತಿರಿಸಿ ಪಾದಗಳ ಹೆಬ್ಬೆರಳನ್ನು ನೋಡುತ್ತಾ ಒಂದರಿಂದ ಐದು ನಿಮಿಷದ ವರೆಗೆ  (ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ) ಅತ್ತಿತ್ತ ಅಲುಗಾಡದಂತೆ ಸ್ಥಿರವಾಗಿ ನಿಲ್ಲಿಸಿ ಸರಳವಾಗಿ ಉಸಿರಾಟ ನಡೆಸಿ.

5) ಈಗ ಮೊದಲು ನಿಮ್ಮ ಸೊಂಟದ ಭಾಗವನ್ನು ಕೆಳಗಿಳಿಸಿ. ಹಾಗೆ ನಿಧಾನವಾಗಿ ಕಾಲುಗಳನ್ನು ಕೆಳಗಿಳಿಸಿ ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಉಪಯೋಗಗಳು:

1) ದೇಹ ಸಂಬಂಧಿ ಎಲ್ಲಾ ಕಾಯಿಲೆಗಳು ನಿವಾರಣೆಯಾಗುತ್ತದೆ.

2) ಕುತ್ತಿಗೆ ಮತ್ತು ಗಂಟಲು ಭಾಗಕ್ಕೆ ಹೆಚ್ಚಿನ ವ್ಯಾಯಾಮ ದೊರೆತು ಥೈರಾಯಿಡ್ ಹಾಗೂ ಪ್ಯಾರಾಥೈರಾಯ್ಡ್ ಗ್ರಂಥಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ.

3) ಈ ಆಸನ ಮಾಡುವುದರಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಅಧಿಕಗೊಂಡು ನೆನಪಿನ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

4) ಉಸಿರಾಟ, ಶ್ವಾಸನಾಳದ ತೊಂದರೆ, ಗಂತಲುಬೇನೆ ಹಾಗೂ ಅರ್ಧ ತಲೆನೋವು  ನಿವಾರಣೆಯಾಗುತ್ತದೆ.

5) ಹಸಿವು ಹೆಚ್ಚಿಸುತ್ತದೆ.

6) ಕೂದಲು ಉದುರುವುದನ್ನು ನಿಲ್ಲಿಸಲು ಹೆಚ್ಚು ಸಹಾಯಕಾರಿ.

ಸೂಚನೆ:

ಬೆನ್ನು ನೋವು , ಸ್ಪಾಂಡಿಲೈಟಿಸ್ , ಹೃದಯ ಸಂಬಂಧಿ ತೊಂದರೆ , ತೀವ್ರ ರಕ್ತದೊತ್ತಡ , ಗರ್ಬಿಣಿಯರು ಮತ್ತು ಮಹಿಳೆಯರು ಮುಟ್ಟಿನ ಸಮಯದಲ್ಲಿ ಮತ್ತು ಗಂಟಲು ಅಥವಾ ಕಿವಿಯ ಸೋಂಕು ಇರುವಂತವರು ಈ ಆಸನ ಮಾಡಬಾರದು.

admin

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

7 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

2 years ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago