Categories: Agriculture

ಕಾಳು ಮೆಣಸು ಅಧಿಕ ಇಳುವರಿಯ ಗುಟ್ಟು; ಇಲ್ಲಿವೆ ಸೂಪರ್ ತಳಿಗಳು

ಹೆಚ್ಚುವ ಭೂಮಿ ಅಗತ್ಯ ಇಲ್ಲದೆ, ಮರಗಳನ್ನೇ ಅವಲಂಬಿಸಿ ಬೆಳೆಯುವ ಕಾಳು ಮೆಣಸು ಕೃಷಿಯಲ್ಲಿ ಬೋನಸ್ ಇದ್ದಂತೆ. ಅಲ್ಪ ಬೆಳೆಯಲ್ಲಿಯೂ ಬಂಗಾರದಂತ ಆದಾಯ ತಂದು ಕೊಡುತ್ತದೆ. ಇಂಥ ಕಾಳು ಮೆಣಸಿನಲ್ಲಿಯೂ ಹೆಚ್ಚು ಇಳುವರಿ ನೀಡುವ ತಳಿ ಯಾವುದು, ಯಾವ ಪ್ರದೇಶಕ್ಕೆ ಯಾವ ತಳಿ ಯೋಗ್ಯ, ರೋಗ ಬರದಂತೆ ಹೇಗೆ ಕಾಪಾಡುವುದು ಎನ್ನುವುದು ಸೇರಿದಂತೆ ಕಾಳು ಮೆಣಸು ಕೃಷಿ ಬಗ್ಗೆ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ. ಅಂಕೇಗೌಡ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾಹಿತಿ ಇಲ್ಲಿದೆ.

ಕಪ್ಪು ಬಂಗಾರ ಎಂದೇ ಕರೆಯಲಾಗುವ ಕಾಳು ಮೆಣಸು ಬೆಳೆಯುವುದರಲ್ಲಿ ಕರ್ನಾಟಕ ದೇಶದಲ್ಲಿಯೇ ನಂಬರ್ ವನ್ ಸ್ಥಾನದಲ್ಲಿದೆ. ಭಾರತದಲ್ಲಿ ವರ್ಷಕ್ಕೆ 50 ಸಾವಿರ ಮೆಟ್ರಿಕ್ ಟನ್ ಕಾಳು ಮೆಣಸು ಉತ್ಪಾದನೆ ಆದರೆ, ಕರ್ನಾಟಕ ರಾಜ್ಯದಲ್ಲಿಯೇ 35 ಸಾವಿರ ಮೆಟ್ರಿಕ್ ಟನ್ ಕಾಳು ಮೆಣಸು ಉತ್ಪಾದನೆ ಆಗುತ್ತದೆ. ಅಷ್ಟರ ಮಟ್ಟಿಗೆ ಕರ್ನಾಟಕ ಕಾಳು ಮೆಣಸು ಬೆಳೆಯಲು ಯೋಗ್ಯವಾಗಿದೆ. ಹಿತ್ತಲಲ್ಲಿರುವ ಮರಗಳಲ್ಲಿಯೇ ಕಾಳು ಮೆಣಸು ಬೆಳೆಯಬಹುದು.

ಕರ್ನಾಟಕದಲ್ಲಿ ಹೆಚ್ಚಾಗಿ ಅಡಕೆ, ಕಾಫಿ ತೋಟದಲ್ಲಿ ಕಾಳು ಮೆಣಸು ಬೆಳೆಯಬಹುದು. ಕಾಳು ಮೆಣಸು ಬೆಳೆಯಲು ಬೇರೆ ಭೂಮಿ ಬೇಕಿಲ್ಲ. ಇದ್ದ ಗಿಡ, ಮರಗಳಲ್ಲಿಯೇ ಬೆಳೆಸಬಹುದು. ಕಾಫಿ ತೋಟದಲ್ಲಿ ಒಂದು ಎಕರೆಗೆ 250 ಕಾಳು ಮೆಣಸು ಗಿಡ ಬೆಳೆಸಬಹುದು. ಒಟ್ಟಾರೆ ಒಂದು ಎಕರೆಯಲ್ಲಿ 250ರಿಂದ 300 ಕೆ.ಜಿ. ಕಾಳು ಮೆಣಸು ಪಡೆಯಬಹುದು.

ಓದಿ: ಹಣ್ಣು, ಹಾಲಿಗಿಂತ ಶ್ರೇಷ್ಠ ನುಗ್ಗೆ ಸೊಪ್ಪು: ಆದಾಯದ ಬೆಳೆ

ಅಧಿಕ ಇಳುವರಿ ತಳಿ
ಕಾಳು ಮೆಣಸಿನ ಪನ್ಯೂರ್ 1 ಎಂಬ ತಳಿ ಅತಿ ಹೆಚ್ಚು ಇಳುವರಿಯನ್ನು ನೀಡುತ್ತದೆ. ಕರ್ನಾಟಕದಲ್ಲಿ ಈ ತಳಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಈ ತಳಿಯ ಬೆಳೆಗೆ ಬಿಸಿಲು ಬೇಕು. ನೆರಳಿನಲ್ಲಿದ್ದರೆ ಇಳುವರಿ ಕಡಿಮೆಯಾಗುತ್ತದೆ.
ಅಡಕೆ ಮರಕ್ಕೆ (ಬುಡದಲ್ಲಿ) ನೆಟ್ಟರೆ ನೆರಳು ಜಾಸ್ತಿಯಾಗಿ ಇಳುವರಿ ಕಡಿಮೆಯಾಗುತ್ತದೆ. ಅದಕ್ಕೆ ಬೆಳಕಿನ ವ್ಯವಸ್ಥೆ ಮಾಡಿದರೆ ಇಳುವರಿ ಚೆನ್ನಾಗಿ ಪಡೆಯಬಹುದು. ಏಪ್ರಿಲ್, ಮೇ ನಲ್ಲಿ ನೀರು ಕೊಟ್ಟರೆ, ಜೂನ್ ನಲ್ಲಿ ಗಂಡು ಹೂ ಬಿಟ್ಟು ಪ್ರತಿ ಕೊನೆಯಲ್ಲಿ ಕಾಳುಗಳು 80, 100 ಬರುತ್ತವೆ. ಗೊಬ್ಬರ, ಕೀಟ ನಿರ್ಹಣೆ ಸರಿಯಾದ ಸಮಯಕ್ಕೆ ಮಾಡಬೇಕು.

ಪನ್ಯೂರ್ 1 ತಳಿ ಮರವನ್ನು ಬೇಗ ಹಿಡಿದುಕೊಳ್ಳುತ್ತದೆ ಮತ್ತು ಬೇಗ ಬೆಳೆಯುತ್ತದೆ. ನರ್ಸರಿ ಮಾಡುವವರಿದ್ದರೆ ಮೂರು ತಿಂಗಳಲ್ಲಿ ಗಿಡ ಬೆಳೆದು ಮಾರಾಟ ಮಾಡಬಹುದು. ರೈತರು ಸಹ ತಮ್ಮ ಹೊಲದಲ್ಲಿ ಬೆಳೆದು ಮಾರಾಟ ಮಾಡಿದ್ದಾರೆ.

ಇನ್ನು ಕೊಳೆ ರೋಗ ತಡೆದುಕೊಳ್ಳುವ ಶಕ್ತಿ ಇರುವ ಐಐಎಸ್ ಆರ್ ಶಕ್ತಿ, ಐಐಎಸ್ ಆರ್ ತೇವಂ ಎನ್ನುವ ಎರಡು ತಳಿ ಅಭಿವೃದ್ಧಿ ಮಾಡಲಾಗಿದೆ. ಎತ್ತರ ಪ್ರದೇಶ ಮತ್ತು ಬೆಟ್ಟ ಪ್ರದೇಶಗಳಲ್ಲಿ ಬೆಳೆಯಲು ಐಐಎಸ್ ಆರ್ ಗಿರಿಮುಂಡ, ಐಐಎಸ್ ಆರ್ ಮಲಬಾರ ಎಕ್ಸೆಲ್ ಎಂಬ ತಳಿ ಹೆಚ್ಚು ಅನುಕೂಲ. ಪನ್ಯೂರ ಎಂಬ ತಳಿ ಪನ್ಯೂರ್ 1 ರಿಂದ 8 ವರೆಗೆ ಇದೆ. ಜತೆಗೆ ಅರ್ಕಾ ಕೂರ್ಗ್ ಎಕ್ಸೆಲ್ ಸಹ ಇಳುವರಿಗೆ ಚೆನ್ನಾಗಿದೆ.

ಬಿತ್ತನೆ ಬೀಜ ಉತ್ಪಾದಕರಾಗಿ, ಕಳಪೆ ಬೀಜ ಪತ್ತೆ ಮಾಡಿ

ಕೊಳೆ ರೋಗ ನಿಯಂತ್ರಣ ಹೇಗೆ?
ಕಾಳು ಮೆಣಸು ಹೆಚ್ಚಾಗಿ ಕೊಳೆ ರೋಗಕ್ಕೆ ತುತ್ತಾಗುತ್ತದೆ. ಹಾಗಾಗಿ ಕೊಳೆ ರೋಗವನ್ನು ಸಾಧ್ಯವಾದಷ್ಟು ತಡೆದುಕೊಳ್ಳ ಬಲ್ಲ ಒಂದಷ್ಟು ತಳಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ಐಐಎಸ್ ಆರ್ ಶಕ್ತಿ, ಐಐಎಸ್ ಆರ್ ತೇವಂ ಎನ್ನುವ ಎರಡು ತಳಿಗಳ ಗಿಡಕ್ಕೆ ಕೊಳೆ ರೋಗ ಬರುವುದು ಕಡಿಮೆ.

ಎಲೆಚುಕ್ಕೆ ರೋಗ?
ಕಾಳು ಮೆಣಸಿನ ಗಿಡಕ್ಕೆ ಜುಲೈನಲ್ಲಿ ಎಲೆ ಚುಕ್ಕೆ ರೋಗ ಬರುತ್ತದೆ. ಅದಕ್ಕಾಗಿ ಏಪ್ರಿಲ್, ಮೇ ನಲ್ಲಿ ಗಿಡಕ್ಕೆ ಇದ್ದ ನೆರಳು ತೆಗೆಯಬೇಕು. 10 ದಿನಗಳಿಗೊಮ್ಮೆ 50 ರಿಂದ 60 ಲೀಟರ್ ನೀರು ಗಿಡದ ಬುಡಕ್ಕೆ ಹಾಕಬೇಕು. ರೋಗ ಬಂದಾಗ ಒಂದು ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ ಡೆಸಿಂ, ಕಂಪ್ಯಾನಿಯನ್ ಅಥವಾ ಶಿಲೀಂದ್ರ ನಾಶಕಗಳನ್ನು ಸಿಂಪಡಣೆ ಮಾಡಬಹುದು.

ಓದಿ: ಲಾಕ್ ಡೌನ್ ನಲ್ಲಿ ಕೃಷಿ ನಷ್ಟ ತಪ್ಪಿಸಿಕೊಳ್ಳಲು ಇದೆ ಪರಿಹಾರ

ಕೀಟ ರೋಗ
ಸ್ಕೇಲ್ ಇನ್ಸೆಟ್ಸ್ ಎನ್ನುವ ಕೀಟಗಳು ಕಾಣು ಮೆಣಸಿನ ಎಲೆಗಳ ಕೆಳಗೆ ಇರುತ್ತದೆ. ಅದರಿಂದ ಎಲೆಗಳು ಒಣಗುತ್ತವೆ. ಕೆಲವೊಮ್ಮೆ ಗಿಡವೂ ಒಣಗುತ್ತವೆ. ಮಿಲಿ ಬಕ್ಸ್ ಎಂಬ ಹುಳ (ಬಿಳಿ ಹುಳ) ಗಿಡದ ಬೇರು ಕೆಳಗೆ ಇರುತ್ತದೆ.
ಸ್ಕೇಲ್ ಇನ್ಸೆಟ್ಟ್ ಕೀಟಕ್ಕೆ ಇಮಿಡಾ ಪ್ಲೋರ್ ಫಿಡ್ 0.3 ಮಿ.ಮೀ./ ಲೀ ಅಥವಾ ಡೈಮೀಟ್ರೆ 2 ಮಿ.ಮೀ/ ಲೀಟರ್ ನೀರಿಗೆ ಹಾಕಿ ಸಿಂಪಡಿಸಬಹುದು. 15 ದಿನಕ್ಕೆ ಒಮ್ಮೆ ಎರಡು ಸಾರಿ ಮಾಡಬೇಕು.

ಮೂಲ: ಚಂದನವಾಹಿನಿ ಸಂದರ್ಶನ.

admin

View Comments

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

2 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

1 year ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago