ಕೋವಿಡ್ 19 ಕೊರೊನಾ ಹೋಗಲಾಡಿಸಲು ಇಡೀ ಜಗತ್ತೇ ಸಾಮಾಜಿಕ ಅಂತರದ ಜಪ ಮಾಡುತ್ತಿದೆ. ಅದಕ್ಕಾಗಿಯೇ ಲಾಕ್ ಡೌನ್ ಅಸ್ತ್ರವನ್ನೂ ಪ್ರಯೋಗಿಸಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿವೆ. ಅಷ್ಟಾದರೂ ಅನೇಕ ಕಡೆ ಇನ್ನೂ ಸಾಮಾಜಿಕ ಅಂತರ ಪಾಲಿಸದ ಜನರ ಬಗ್ಗೆ ಆಕ್ಷೇಪವೂ, ಜಾಗೃತಿ ಪ್ರಯೋಗವೂ ನಡೆಯುತ್ತಲೇ ಇದೆ.

ಹೀಗಿರುವಾಗ ಲಾಕ್ ಡೌನ್ ನಲ್ಲಿ ಬಂದಾದ ಸರಕಾರಿ ಶಾಲೆ ಆವರಣದಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲುಗಳು ಸಾಮಾಜಿಕ ಅಂತರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಪಕ್ಷಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಪರಿ ದೇಶವನ್ನೇ ನಿಬ್ಬೆರಗಾಗಿಸಿದೆ.

ಇದನ್ನೂ ಓದಿ: ಸಂಗಾತಿಗಾಗಿ 3200 ಕಿ.ಮೀ. ಸಂಚರಿಸಿದ ಗಂಡು ಹುಲಿ

ಯಾರಿಲ್ಲದ ಶಾಲೆಯಲ್ಲಿ ನವಿಲುಗಳು ಸಾಮಾಜಿಕ ಅಂತರದಲ್ಲಿ ಸಭೆ ನಡೆಸುತ್ತಿವೆ. ಕೋವಿಡ್ 19 ಎದುರಿಸಲು ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದನ್ನು ನವಿಲುಗಳನ್ನು ತಿಳಿ ಹೇಳುತ್ತಿವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರೆಸ್ ಇನ್ ಫಾರ್ಮೇಷನ್ ಬ್ಯುರೊ ಸಹ ಅದನ್ನು ರಿಟ್ವೀಟ್ ಮಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದಕ್ಕೆ ಇದು ಉತ್ತಮ ಪಾಠ ಎಂದು ನವಿಲುಗಳ ವರ್ತನೆಯನ್ನು ಹೊಗಳಿದೆ.

ಇದನ್ನೂ ಓದಿ: ಸೆರೆ ಹಿಡಿಯಲು ಬಂದವರಿಗೇ ಚಳ್ಳೆ ಹಣ್ಣು ತಿನ್ನಿಸಿದ ಚಿರತೆ

ಅಸಲಿಗೆ ಇದು ರಾಜಸ್ತಾನದ ನಾಗುರ ಜಿಲ್ಲೆಯ ರೂನ್ ಎನ್ನುವ ಗ್ರಾಮದಲ್ಲಿ ಕಂಡು ಬಂದ ದೃಶ್ಯ. ಲಾಕ್ ಡೌನ್ ಕಾರಣಕ್ಕೆ ಅಲ್ಲಿ ಶಾಲೆಗಳಗೆ ರಜೆ ಘೋಷಣೆಯಾಗಿವೆ. ಬಾಗಿಲು ಹಾಕಿದ್ದ ಸರಕಾರಿ ಶಾಲೆಯ ವರಾಂಡದಲ್ಲಿ ಸೇರಿದ ಸುಮಾರು ಏಳು ನವಿಲುಗಳು ಪರಸ್ಪರ 2-3 ಅಡಿ ಅಂತರದಲ್ಲಿ ಕುಳಿತಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಆ ದೃಶ್ಯವನ್ನು ಸೆರೆ ಹಿಡಿದಿದಿದ್ದಾರೆ. ಅದು ಈಗ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಹುಲಿ ಬೇಟೆಗಾರ ಅಷ್ಟೇ ಅಲ್ಲ, ರೊಮ್ಯಾಂಟಿಕ್ ಕೂಡ ಹೌದು