ರೈತರ ಹೋರಾಟ, ಬೆಲೆ ಏರಿಕೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಭಿನ್ನ ಧ್ವನಿಗಳು ಏಳುತ್ತಿವೆ. ಇಂಥ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನುವ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿದೆ.

“ಪ್ರಧಾನ ಮಂತ್ರಿಯ ಮಾತುಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಭ್ರಷ್ಟ ನಾಯಕರು ಮತ್ತು ಸರ್ಕಾರದ ವಿರುದ್ಧ ಹೋರಾಡುವುದು ಪ್ರಜಾಪ್ರಭುತ್ವದ ಅಧಿಕಾರ, ಜನರ ಅಧಿಕಾರ, ವಿರೋಧ ಪಕ್ಷಗಳ ಅಧಿಕಾರ. ಈ ಅಧಿಕಾರವನ್ನು ಸಂವಿಧಾನ ನೀಡಿದೆ ಎನ್ನುವ ವಿಚಾರಗಳುಳ್ಳ ವಿಡಿಯೊ ಇದಾಗಿದೆ.

ಈಚೆಗೆ ಸದನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಂದೋಲನಜೀವಿ ಎನ್ನುವ ಪದ ಬಳಸಿ ವಿರೋಧ ಪಕ್ಷ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಕುರಿತಾಗಿ ಹೇಳಿದ್ದರು. ಅದೇ ಹ್ಯಾಶ್‌ಟ್ಯಾಗ್ ಬಳಸಿ ಟ್ವಿಟರ್‌ನಲ್ಲಿ ನಿತಿನ್ ಗಡ್ಕರಿ ಅವರು ಮಾತನಾಡುವ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಆರೋಪ:

ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರು ರವಿಶಂಕರ ಪ್ರಸಾದ ಅವರ ಎದುರಲ್ಲಿಯೇ ಪ್ರಧಾನಿ ಮಂತ್ರಿ ಅವರ ಆಂದೋಲನ ಜೀವಿ ಹೇಳಿಕೆಯನ್ನು ಖಂಡಿಸಿದ್ದಾರೆ ಎಂದು ವಿಡಿಯೊ ಪೋಸ್ಟ್ ಮಾಡಲಾಗಿದೆ.

ವೈರಲ್ ಚೆಕ್:

ವೈರಲ್ ಆಗಿರುವ ಈ ವಿಡಿಯೊನ ಸತ್ಯಾಂಶ ಹುಡುಕಲು ಮುಂದಾದ ದಿ ಸ್ಟೇಟ್ ನೆಟ್ವರ್ಕ್ ಫ್ಯಾಕ್ಟ್ ಚೆಕ್ ತಂಡ ಗೂಗಲ್‌ನಲ್ಲಿ ಕೈ ವರ್ಡ್ ಬಳಸಿ ಹುಡುಕಾಟ ನಡೆಸಿದರು. nitin gadkari criticises prime minister ಎನ್ನುವ ಕೀವಡ್ ಸರ್ಚ್ ಮಾಡಿದೆವು.

ಯುಟ್ಯೂಬ್‌ನಲ್ಲಿಯೂ ಇದೇ ಕೀ ವರ್ಡ್ ಸರ್ಚ್ ಮಾಡಿದಾಗ ಬಿಜೆಪಿಯ ಅಧಿಕೃತ ಯೂಟ್ಯೂಬ್‌ನಲ್ಲಿ ಚಾನಲ್‌ನಲ್ಲಿ ಈ ವಿಡಿಯೊ ದೊರೆಯಿತು. ಅದು 2011ರ ಆಗಸ್ಟ್ 15ರಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ನಿತಿನ್ ಗಡ್ಕರಿ ಅವರು ನೀಡಿದ ಹೇಳಿಕೆ.

ಆ ವಿಡಿಯೊವನ್ನು BJP Byte: Anna Hazare & Prime Minister: 15.08.2011 ಹೆಸರಿಯೊಂದಿಗೆ ಬಿಜೆಪಿ ಯೂಟ್ಯೂಬ್ ಚಾನೆಲ್‌ನಲ್ಲಿ 16-8-2011 ರಂದು ಪೋಸ್ಟ್ ಮಾಡಲಾಗಿದೆ. ನಿತಿನ ಗಡ್ಕರಿ ಅವರು ತಮ್ಮ ಮಾತಿನಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರ ವಿರುದ್ಧ ಮಾತನಾಡಿದ್ದರು.

ಫಲಿತಾಂಶ

ಆರೋಪ: ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರು ರವಿಶಂಕರ ಪ್ರಸಾದ ಅವರ ಎದುರಲ್ಲಿಯೇ ಪ್ರಧಾನಿ ಮಂತ್ರಿ ಅವರ ಆಂದೋಲನ ಜೀವಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಫಲಿತಾಂಶ: ಸುಳ್ಳು