ರಾಣಿ ಚನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು ಎನ್ನುತ್ತಲೇ ಮಾತು ಆರಂಭಿಸಿದ ಮೋದಿಜಿ
ಹುಬ್ಬಳ್ಳಿ: ಮುರುಸಾವಿಮಠ, ಸಿದ್ಧಾರೂಢರ ಮಠ ಇಂತ ಅನೇಕ ಮಠಗಳಿರುವ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು ಎನ್ನುತ್ತ ಕನ್ನಡದಲ್ಲೆ ಪ್ರಧಾನಿ ನರೇಂದ್ರ ಮೋದಿಯವರ ಮಾತು ಆರಂಭಿಸಿದ್ರು.
ಇಂದು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹುಬ್ಬಳ್ಳಿಯ ಧಾರ್ಮಿಕ ಕ್ಷೇತ್ರಗಳನ್ನು ನೆನೆದ್ರು. ರಾಣಿ ಚನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು. ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಅವರಂತಹ ಸಂಗೀತ ಮಹನೀಯರನ್ನು ಕೊಟ್ಟ ಸಂಸ್ಕೃತಿಯ ನಾಡು ಇದು ಎಂದರು.
ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಸಿಯಾಚಿನ್ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ಹನುಮಂತಪ್ಪ ಕೊಪ್ಪದ ಅವರನ್ನು ಸ್ಮರಿಸಿದ್ರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ನೆನೆದರು.
ಇದೇ ವೇಳೆ ಇತ್ತೀಚಿಗಷ್ಟೆ ಲಿಂಗೈಕ್ಯರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು.