ಪ್ರಧಾನಿ ಮೋದಿಯವರ ರೋಡ್ ಶೋ ವೇಳೆ ಭದ್ರತಾ ಲೋಪ
ಹುಬ್ಬಳ್ಳಿ: 26 ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡಲು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದಿಳಿ ಅವರು, ಗೋಕುಲ್ ರಸ್ತೆಯಿಂದ ರೈಲ್ವೆ ಮೈದಾನದವರೆಗೆ ಸುಮಾರು 9ಕಿ.ಮಿ. ವರೆಗೆ ರೋಡ್ ಶೋ ನಡೆಸಿದ್ರು. ಈ ಸಂದರ್ಭದಲ್ಲಿ ಭದ್ರತಾ ದೋಷ ಕಂಡುಬಂದಿದೆ. ಪ್ರಧಾನಿ ಮೋದಿಯವರು ಕಾರಿನಿಂದ ಕೈ ಬೀಸುವಾಗ ಏಕಾಏಕಿ ಓಡಿ ಬಂದ ಯುವಕನೊಬ್ಬ ಹಾರಹಾಕಲು ಪ್ರಯತ್ನಿಸಿದ್ದಾನೆ. ತಕ್ಷಣ ಧಾವಿಸಿ ಬಂದ ಎಸ್ ಪಿಜಿ ಭದ್ರತಾ ಸಿಬ್ಬಂದಿ ಯುವಕನನ್ನು ಪಾಕಕ್ಕೆ ಎಳೆದುಕೊಂಡು ಹೋದ್ರು.
ಕಾಕಿ ಸರ್ಪಗಾವಲಿನ ನಡುವೆಯೂ ಯುವಕ ಎಲ್ಲರ ಕಣ್ಣು ತಪ್ಪಿಸಿ ಪ್ರಧಾನಿ ಮೋದಿಯವರ ಬಳಿ ಹೇಗೆ ಬಂದ ಅನ್ನೋದೆ ಆಶ್ಚರ್ಯವಾಗಿದೆ.