
ಎರಡಕ್ಕಿಂತ ಹೆಚ್ಚು ಬಾರಿ ಟೀ ಕುಡಿದ್ರೆ ಏನಾಗುತ್ತೆ ಗೊತ್ತಾ?

ಟೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮನೆಗೆ ಬಂದ ಅತಿಥಿ ಸತ್ಕಾರದಿಂದ ಹಿಡಿದು ಮೀಟಿಂಗ್ ಗಳವರೆಗೆ ಆತ್ಮೀಯರು ಸಿಕ್ಕಾಗ ಒಂದ್ ಕಪ್ ಟೀ ಅನ್ನೊ ತನಕ ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ.
ಇನ್ನೂ ಟೀ ಇಲ್ಲದೆ ಅದೆಷ್ಟೊ ಜನರ ದಿನವೇ ಸ್ಟಾರ್ಟ್ ಆಗಲ್ಲ. ಟೀ ಹಲವರ ಮೈಂಡ್ ರೀಪ್ರೆಶ್ ಮೆಂಟ್ ನ ರೆಮಿಡಿ ಕೂಡ ಹೌದು. ಆದ್ರೆ ಯಾವುದೇ ಇರಲಿ ಅತಿಯಾದ್ರೆ ಅಮೃತವೂ ವಿಷ ಆಗುತ್ತೆ ಅನ್ನೊ ಮಾತಿದೆ. ಹೀಗೆ ಟೀ ಅತಿಯಾದ್ರೆ ಏನಾಗುತ್ತೆ ಮುಂದೆ ನೋಡೊಣ.
ಟೀ ದಿನಕ್ಕೆ ಒಂದೆರಡು ಬಾರಿ ಕುಡಿದ್ರೆ ಒಳಿತು, ಕೆಲವೊಮ್ಮೆ ಮೂರು ಸಲ ಸವಿದ್ರೂ ಓಕೆ. ಆದ್ರೆ ಪ್ರತಿ ದಿನ ನಾಲ್ಕಕಿಂತ ಹೆಚ್ಚು ಬಾರಿ ಟೀ ಕುಡಿದ್ರೆ ಕೆಲ ಆರೋಗ್ಯ ಸಮಸ್ಯೆ ಉಂಟಾಗುತ್ತವೆ.
ಆತಂಕ ಮತ್ತು ಒತ್ತಡ ಹೆಚ್ಚಾಗುತ್ತೆ, ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ನಿದ್ರಾಹಿನತೆ ಹಾಗೂ ಎದೆಯುರಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಸ್ತ್ರೀಯರಿಗೆ ಗರ್ಭಾವಸ್ಥೆಯ ತೊಡಕುಗಳು ಎದುರಾಗಬಹುದು. ಹೀಗಾಗಿ ಟೀ ಅಭ್ಯಾಸ ಇತಿಮಿತಿಯಲ್ಲಿರಲಿ.

ಆದ್ರೆ ಕೆಟ್ಟದರ ಜೊತೆ ಒಳ್ಳೆದು, ಒಳ್ಳೆದ್ರ ಸಂಗಡ ಕೆಟ್ಟದು ಇದ್ದೆ ಇರುತ್ತೆ. ಹಾಗೆ ಲೆಮನ್ ಟೀ, ತುಳಸಿ ಟೀ, ಶುಂಠಿ ಟೀ, ಗ್ರೀನ್ ಟೀ, ಮಸಾಲೆ ಟೀ ಕುಡಿಯೊದ್ರಿಂದ ಶೀತ, ಕೆಮ್ಮು, ಕಫ ಹಾಗೂ ಆಯಾಸ ಹಾಗೂ ಕೊಬ್ಬು ಕಡಿಮೆ ಆಗುತ್ತವೆ.