ಈ ಸಾವು ನ್ಯಾಯವೇ? ಮೆಟ್ರೋ ಫಿಲ್ಲರ್ ಬಿದ್ದು ತಾಯಿ, ಮಗು ಸಾವು: ಇನ್ನೊಂದು ಮಗು, ತಂದೆ ಜಸ್ಟ್ ಮಿಸ್

ಈ ಸಾವು ನ್ಯಾಯವೇ? ಮೆಟ್ರೋ ಫಿಲ್ಲರ್ ಬಿದ್ದು ತಾಯಿ, ಮಗು ಸಾವು: ಇನ್ನೊಂದು ಮಗು, ತಂದೆ ಜಸ್ಟ್ ಮಿಸ್

ಬೆಂಗಳೂರು: ಮೆಟ್ರೋ ಫಿಲ್ಲರ್ ಬಿದ್ದು ತಾಯಿ ಹಾಗೂ 2ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಎಚ್ ಬಿಆರ್ ಲೇಔಟ್ ನ ರಿಂಗ್ ರೋಡ್ ನಲ್ಲಿ ನಡೆದಿದೆ.

ತೇಜಸ್ವಿನಿ (28 ತಾಯಿ) ಹಾಗೂ 2 ವರ್ಷ 6 ತಿಂಗಳ ಮಗು ವಿಹಾನ್ ಮೃತ ದುರ್ದೈವಿಗಳು. ಅದೃಷ್ಟವಶಾತ್ ಇನ್ನೊಂದು ಮಗು ವಿಸ್ಮೀತಾ ಮತ್ತು ಲೋಹಿತ್ ಕುಮಾರ್ (35 ತಂದೆ) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಗವಾರ ಎಚ್ ಬಿಆರ್ ಲೇಔಟ್ ನ ರಿಂಗ್ ರೋಡ್ ನಲ್ಲಿ ಕುಟುಂಬ ಸಮೇತವಾಗಿ ತಂದೆ, ತಾಯಿ ಹಾಗೂ 2 ಮಕ್ಕಳು ಬೈಕ್ ನಲ್ಲಿ ಸಾಗುತ್ತಿದ್ದರು. ಈ ವೇಳೆ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಫಿಲ್ಲರ್ ಕುಸಿದು ಬೈಕ್ ನಲ್ಲಿದ್ದವರ ಮೇಲೆ ಬಿದ್ದಿದೆ.

ತಕ್ಷಣ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ 1ಗಂಟೆ ಪ್ರಯತ್ನಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ತೇಜಸ್ವಿನಿ ಆಸ್ಪತ್ರೆಗೆ ಬರುವಷ್ಟರಲ್ಲೇ ಮೃತಪಟ್ಟಿದ್ದರು. ಇನ್ನು ಬೈಕ್ ಸವಾರ ಮತ್ತು ಇನ್ನೊಂದು ಮಗು ಹಾಗೂ ತಂದೆ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಧಾರವಾಡ ಮೂಲದ ತೇಜಸ್ವಿನಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಗದಗ ಮೂಲದ ಲೋಹಿತ್ ಕುಮಾರ್ (ಮೃತಳ ಪತಿ) ಸಿವಿಲ್ ಇಂಜಿನಿಯರ್ ಆಗಿದ್ದು, ಇವರು ನಾಗವಾರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಆದ್ರೆ ದುರಂತಕ್ಕೆ ಹೊಣೆ ಯಾರು ಎಂಬುದು ಪ್ರಶ್ನೆ ? ಬಿಎಂಆರ್ ಸಿ ಹೊಣೆನಾ, ಬಿಬಿಎಂಪಿ ನಾ, ರಾಜ್ಯ ಸರ್ಕಾರವಾ ಯಾರು ಜವಾಬ್ದಾರರು ಎಂದು ಪ್ರತ್ಯಕ್ಷದರ್ಶಿಗಳು ಕೇಳುತ್ತಿದ್ದಾರೆ.

ಕಾಮಗಾರಿ ನಡೆಯುತ್ತಿದೆ ಎಂದಾಗ ಅಲ್ಲಿ ರೂಟ್ ಡೈವರ್ಸೆನ್ ಮಾಡಬೇಕಿತ್ತು. ಅದ್ಯಾವುದು ಇಲ್ಲಿ ಆಗಿಲ್ಲ. ಕನಿಷ್ಟ ಸುರಕ್ಷತೆಯನ್ನು ತೆಗೆದುಕೊಳ್ಳದೆ ಕಾಮಗಾರಿ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆದ್ರೆ ಬೆಂಗಳೂರಿನ ಬೇರೆ ಬೇರೆ ಭಾಗಗಳಲ್ಲಿ ಮೆಟ್ರೋ ಕಾಮಗಾರಿ ನಡೀತಿದೆ. ಹೀಗಾಗಿ ಪ್ರಯಾಣಿಕರು ನಿಮ್ಮ ಜಾಗೃತಿಯಲ್ಲಿ ನಿವೀರಿ.

Leave a reply

Your email address will not be published. Required fields are marked *