ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ ಸಿ) ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. 21 ಇಲಾಖೆಗಳ 1789 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಲಾಕ್ ಡೌನ್ ಘೋಷಣೆಯಾದ ಬಳಿಕ ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ತಡೆ ನೀಡಿತ್ತು. ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ಕರ್ನಾಟಕ ಲೋಕಸೇವಾ ಆಯೋಗ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಹುದ್ದೆಗಳ ಮಾಹಿತಿಯನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ.

ಅಧಿಸೂಚನೆ 1: 2006 ತಿದ್ದುಪಡಿ ನಿಯಮಗಳ ಅನ್ವಯ ವಿವಿಧ 19 ಇಲಾಖೆಗಳಲ್ಲಿನ ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪದವಿ ವಿದ್ಯಾರ್ಹತೆಯುಳ್ಳ ಹುದ್ದೆಗಳು: 131
ಪದವಿ ಪೂರ್ವ ವಿದ್ಯಾರ್ಹತೆಯುಳ್ಳ (ಪಿಯುಸಿ ಅಥವಾ ತತ್ಸಮಾನ) ಹುದ್ದೆಗಳು: 392

ಅಧಿಸೂಚನೆ 2: ಕರ್ನಾಟಕ ಲೋಕಸೇವಾ ಆಯೋಗವು ಆಯುಷ್ ಇಲಾಖೆಯಲ್ಲಿನ ಗ್ರೂಪ್ ಎ, ಬಿ, ಸಿ ತಾಂತ್ರಿಕ ವರ್ಗದ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಾಧ್ಯಾಪಕರು, ಸಹಪ್ರಾಧ್ಯಾಪಕರು: 20
ಆಯುರ್ವೇದ/ ಯುನಾನಿ/ ಹೋಮಿಯೋಪತಿ/ ಪ್ರಕೃತಿ ಚಿಕಿತ್ಸೆ/ ಯೋಗ ವೈದ್ಯಾಧಿಕಾರಿಗಳು: 110
ಸಹಾಯಕ ಪ್ರಾಧ್ಯಾಪಕರು: 47
ಶುಶ್ರೂಷಕರು: 23
ಔಷಧ ವಿತರಕರು: 76

ಅಧಿಸೂಚನೆ 3: ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿನ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಹಾಯಕ ಎಂಜಿನಿಯರ್ (ಗ್ರೇಡ್ 1) ಸಿವಿಲ್: 660
ಕಿರಿಯ ಎಂಜಿನಿಯರ್ ಸಿವಿಲ್: 330

ಅರ್ಜಿ ಸಲ್ಲಿಸುವುದು ಹೇಗೆ?
ಕೆಪಿಎಸ್ ಸಿ ವಿಳಾಸಕ್ಕೆ ಭೇಟಿ ನೀಡಿ: http://kpsc.kar.nic.in/
ಮೊದಲೇ ಹಂತ: Profile Creation/Updation
ಎರಡನೇ ಹಂತ : Application Submission
ಮೂರನೇ ಹಂತ: Fees Payment through My Application section

ಅಧಿಸೂಚನೆ 1ರ (ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳು) ಅರ್ಜಿ ಸಲ್ಲಿಕೆ ದಿನಾಂಕಗಳು.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-8-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19-9-2020
ಶುಲ್ಕ ಪಾವತಿಸಲು ಕೊನೆ ದಿನಾಂಕ: 21-9-2020
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: ನಂತರ ತಿಳಿಸಲಾಗುತ್ತದೆ.

ಅಧಿಸೂಚನೆ 2ರ (ಆಯುಷ್ ಇಲಾಖೆ ಹುದ್ದೆಗಳು) ಅರ್ಜಿ ಸಲ್ಲಿಕೆ ದಿನಾಂಕಗಳು.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-8-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-9-2020
ಶುಲ್ಕ ಪಾವತಿಸಲು ಕೊನೆ ದಿನಾಂಕ: 15-9-2020

ಅಧಿಸೂಚನೆ 3ರ (ಲೋಕೋಪಯೋಗಿ ಇಲಾಖೆ ಹುದ್ದೆಗಳು) ಅರ್ಜಿ ಸಲ್ಲಿಕೆ ದಿನಾಂಕಗಳು.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 17-8-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-9-2020
ಶುಲ್ಕ ಪಾವತಿಸಲು ಕೊನೆ ದಿನಾಂಕ: 18-9-2020

ಅಧಿಸೂಚನೆಗಳು
ಅಧಿಸೂಚನೆ 1: Click Hear
ಅಧಿಸೂಚನೆ 2: Click Hear
ಅಧಿಸೂಚನೆ 3: Click Hear
ನೇರ ಅರ್ಜಿ ಸಲ್ಲಿಕೆ ವಿಳಾಸ: http://kpsc.kar.nic.in/