ಕೆ-ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 4 ಲಾಸ್ಟ್ ಡೇಟ್

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ದಿನಾಂಕ ಪ್ರಕಟಗೊಂಡಿದೆ. ಪರೀಕ್ಷೆ ಬರೆಯಲು ಇಚ್ಚಿಸುವವರು ಮಾರ್ಚ್ 4 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರಕಾರಿ, ಅನುದಾನಿತ ಮತ್ತು ಖಾಸಗಿ) ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆಪಡೆಯುತ್ತಾರೆ.
ಏಪ್ರಿಲ್ 12ರಂದು ಪರೀಕ್ಷೆ ನಡೆಯಲಿವೆ. ಒಟ್ಟು 41 ವಿವಿಧ ವಿಷಯಗಳಿಗೆ ರಾಜ್ಯಾದಂತ ಒಟ್ಟು 11 ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ.
ಪ್ರಮುಖ ದಿನಾಂಕಗಳು
* ಅಧಿಸೂಚನೆ ದಿನಾಂಕ- 2020 ಫೆಬ್ರುವರಿ 1
* ಆನ್‍ಲೈನ್ ಅರ್ಜಿ ಸಲ್ಲಿಕೆ ಆರಂಭ- 2020 ಫೆಬ್ರುವರಿ 3
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 2020 ಮಾರ್ಚ್ 4
* 250 ರೂ. ದಂಡದೊಂದಿಗೆ ಅರ್ಜಿ
ಸಲ್ಲಿಸಲು ಕೊನೆ ದಿನಾಂಕ- 2020 ಮಾರ್ಚ್ 9
* ಪರೀಕ್ಷೆ ದಿನಾಂಕ- 2020 ಏಪ್ರಿಲ್ 12
ಅರ್ಹತೆಗಳೇನು?
ಅಭ್ಯರ್ಥಿಗಳು ಯುಜಿಯಿಂದ ಮಾನ್ಯತೆ ಪದೆದಿರುವ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಸ್ನಾತಕೋತ್ತರ ಅಥವಾ ಸಮನಾದ ಪರೀಕ್ಷೆಗಳಲ್ಲಿ ಕನಿಷ್ಟ 55% ರಷ್ಟು ಅಂಕ ಪಡೆದಿರಬೇಕು. ಎಸ್ ಸಿ, ಎಸ್ ಟಿ, ವಿಕಲಚೇತನ ಮತ್ತು ಒಬಿಸಿ ಅಭ್ಯರ್ಥಿಗಳು 50% ರಷ್ಟು ಅಂಕದೊಂದಿಗೆ ಪಾಸಾಗಿರಬೇಕು.
ಸದ್ಯ ವ್ಯಾಸಾಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೂಡ ಕೆ-ಸೆಟ್ ಪರೀಕ್ಷೆ ಬರೆಯಲು ಅರ್ಹರು. ಆದರೆ, ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯಲ್ಲಿ ನಿಗದಿಪಡಿಸಿದ ಅಂಕಗಳೊಂದಿಗೆ ತೇರ್ಗಡೆಯಾಗಿ ಕೆ-ಸೆಟ್ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗೆ ಸ್ನಾತಕೋತ್ತರ ಪದವಿ ಅಂಕ ಪಟ್ಟಿಗಳನ್ನು ಸಲ್ಲಿಸಬೇಕು. ಅಂದಾಗ ಮಾತ್ರ ಅವರು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣಪತ್ರ ಪಡೆಯಬಹುದು
ಅರ್ಜಿ ಶುಲ್ಕ :
ಸಾಮಾನ್ಯ ವರ್ಗದ ಅಭ್ಯರ್ಥಿಗಳು 1,150ರೂ. ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು 950ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳು 650 ರೂ. ಪರೀಕ್ಷಾ ಶುಲ್ಕ ಪಾವತಿಸಬೇಕು.
ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಸ್ವವಿವರ ಮತ್ತು ಶೈಕ್ಷಣಿಕ ಮಾಹಿತಿಯೊಂದಿಗೆ ತಮ್ಮ ಹೆಸರು ನೋಂದಣಿ ಮಾಡಿದ ನಂತರ ಆನ್ ಲೈನ್ ನಲ್ಲಿಯೇ ಶುಲ್ಕ ಪಾವತಿಸಬಹುದು. ಸ್ಟೇಟ್ ಬ್ಯಾಂಕ್ ನ ಬಡ್ಡಿ ಇ-ವಾಲೆಟ್ ಪಾವತಿ ಅಥವಾ ಎಸ್ ಬಿ ಐ ಶಾಖೆ ಮೂಲಕವೂ ಪಾವತಿಸಬಹುದು. ನಿಗದಿತ ಅವಧಿ ಮುಗಿದ ನಂತರ ದಂಡ ಶುಲ್ಕ 250 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು.
ನೋಟಿಪಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Trackbacks/Pingbacks