Select Page

ಇಸ್ರೋದಲ್ಲಿ 182 ಹುದ್ದೆಗಳು ಖಾಲಿ; SSLC, ಡಿಪ್ಲೊಮಾ, ಡಿಗ್ರಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಇಸ್ರೋದಲ್ಲಿ 182 ಹುದ್ದೆಗಳು ಖಾಲಿ; SSLC, ಡಿಪ್ಲೊಮಾ, ಡಿಗ್ರಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಇಸ್ರೋ ನೇಮಕಾತಿ 2020: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಬೆಂಗಳೂರಿನ ಯುಆರ್ ರಾವ್ ಬಾಹ್ಯಾಕಾಶ ಕೇಂದ್ರ ಕಚೇರಿಯಲ್ಲಿ ಕುಕ್, ಫೈಯರ್ ಮ್ಯಾನ್, ಡ್ರೈವರ್,  ತಂತ್ರಜ್ಞರು, ತಾಂತ್ರಿಕ ಸಹಾಯಕರು ಸೇರಿ 182 ವಿವಿಧ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿಯಿಂದ ಪದವಿ ವರೆಗಿನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರಿನ ಯುಆರ್ ರಾವ್ ಬಾಹ್ಯಾಕಾಶ ಕೇಂದ್ರವು ಇಸ್ರೋದ ಪ್ರಮುಖ ಕೇಂದ್ರವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಸ್ರೋದ ಅಧಿಕೃತ ವೆಬ್ ಸೈಟ್ isro.gov.in ನಲ್ಲಿ 2020ರ ಮಾರ್ಚ್ 6 ರೊಳಗೆ ಅರ್ಜಿಸಲ್ಲಿಸಬೇಕು.
45 ಸಾವಿರ ರೂ. ವೇತನ:
ತಾಂತ್ರಿಕ ಸಹಾಯಕ, ಸೈಂಟಿಫಿಕ್ ಸಹಾಯಕ, ಗ್ರಂಥಾಲಯ ಸಹಾಯಕ ಹುದ್ದೆಗೆ ಆಯ್ಕೆಯಾದರೆ ತಿಂಗಳಿಗೆ 44,900 ರೂ. ವೇತನ ಮತ್ತು ಇತರ ಭತ್ತೆ ಸಿಗಲಿದೆ. ಹಿಂದಿ ಟೈಪಿಸ್ಟ್ ಗೆ ತಿಂಗಳಿಗೆ 25,500 ರೂ. ಮತ್ತು ಇತರ ಭತ್ತೆ ಕೊಡಲಾಗುತ್ತದೆ. ಬಿ ದರ್ಜೆ ತಂತ್ರಜ್ಞರಿಗೆ ಮಾಸಿಕ 21,700 ರೂ. ಹಾಗು ಅಡುಗೆ ಮಾಡುವರಿಗೆ ಮತ್ತು ಭಾರೀ ವಾಹನ ಚಾಲಕರಿಗೆ ತಿಂಗಳಿಗೆ 19,900 ರೂ. ಸಿಗಲಿದೆ. ಕ್ಯಾಟರಿಂಗ್ ಅಟಂಡೆಂಟ್ ಗೂ ತಿಂಗಳಿಗೆ 18 ಸಾವಿರ ವೇತನ ಜತೆಗೆ ಇತರ ಭತ್ತೆಗಳು ಸಿಗಲಿದೆ.

ಖಾಲಿ ಹುದ್ದೆಗಳು ಎಷ್ಟು?
ತಂತ್ರಜ್ಞ, ತಾಂತ್ರಿಕ ಸಹಾಯಕ, ಡ್ರಾಫ್ಟ್‌ಮ್ಯಾನ್ ಮತ್ತು ಇತರ ಹುದ್ದೆ ಸೇರಿ 182 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸಲಾಗುತ್ತಿದೆ. ಈ ಪೈಕಿ ಟೆಕ್ನಿಷಿಯನ್-ಬಿ ನಲ್ಲಿ 102 ಖಾಲಿ ಹುದ್ದೆಗಳಿಗೆ ಭರ್ತಿ ನಡೆಯಲಿದೆ.
ಡ್ರಾಫ್ಟ್‌ಮ್ಯಾನ್-ಬಿ-3, ಟೆಕ್ನಿಕಲ್ ಅಸಿಸ್ಟೆಂಟ್‌-41, ಲೈಬ್ರರಿ ಅಸಿಸ್ಟೆಂಟ್‌- 4, ವೈಜ್ಞಾನಿಕ ಸಹಾಯಕ- 7, ಹಿಂದಿ ಟೈಪಿಸ್ಟ್‌- 2, ಕ್ಯಾಟರಿಂಗ್ ಅಟೆಂಡೆಂಟ್-‘ಎ’- 5, ಅಡುಗೆಯವರಿಗೆ- 5 , ಫೈರ್‌ಮ್ಯಾನ್-ಎ- 4, ಲಘು ವಾಹನ ಚಾಲಕ-ಎ- 4, ಭಾರೀ ವಾಹನ ಡ್ರೈವರ್-ಎ- 5 ಖಾಲಿ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ.

ವಯೋಮಿತಿ ಏನು?
ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ಗ್ರಂಥಾಲಯ ಸಹಾಯಕ, ತಂತ್ರಜ್ಞ- ಬಿ, ಕುಕ್, ಹೆವಿ ವೆಹಿಕಲ್ ಡ್ರೈವರ್ ‘ಎ, ಮತ್ತು ಲಘು ವಾಹನ ಚಾಲಕ ‘ಎ ಖಾಲಿ ಹುದ್ದೆಗಳಿಗೆ ಅರ್ಜಿದಾರರು 18-35 ವರ್ಷ ವಯಸ್ಸಿನವರಾಗಿರಬೇಕು.
ಹಿಂದಿ ಟೈಪಿಸ್ಟ್ ಮತ್ತು ಕ್ಯಾಟರಿಂಗ್ ಅಟೆಂಡೆಂಟ್-‘ಎ ’ಹುದ್ದೆಗಳ ಅಭ್ಯರ್ಥಿಯು 18-26 ವರ್ಷ ವಯಸ್ಸಿನವರಾಗಿರಬೇಕು. ಫೈರ್‌ಮ್ಯಾನ್-ಎ ಹುದ್ದೆಗಳಿಗೆ, ಅರ್ಜಿದಾರರು 18-25 ವರ್ಷ ವಯಸ್ಸಿನವರಾಗಿರಬೇಕು.

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಒಬಿಸಿ ಮತ್ತು ಇಡಬ್ಲುಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗ) ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳಾ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಮಾಜಿ ಸೈನಿಕ, ಅಂಗವಿಕಲ (ಪಿಡಬ್ಲುಬಿಡಿ) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳು ಇಂಟರ್ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಬಳಸಿ ‘ಆನ್‌ಲೈನ್’ಪಾವತಿ ಮಾಡಬಹುದು.

1 Comment

  1. best cbd oil

    Thanks for the marvelous posting! I certainly enjoyed reading it, you will be a great author.I will
    always bookmark your blog and will eventually come back from now on. I want to encourage continue
    your great writing, have a nice evening!

    Reply

Leave a reply

Your email address will not be published. Required fields are marked *