Select Page

ಸೇನಾ ನೇಮಕಾತಿ ರ್ಯಾಲಿ ಆನ್ ಲೈನ್ ನೋಂದಣಿ ಆರಂಭ

ಸೇನಾ ನೇಮಕಾತಿ ರ್ಯಾಲಿ ಆನ್ ಲೈನ್ ನೋಂದಣಿ ಆರಂಭ

ಭಾರತೀ ಸೇನೆ ಸೇರಬೇಕು ಎಂದು ಬಯಸುವವರಿಗೆ ಸದಾವಕಾಶ. ಉಡುಪಿಯಲ್ಲಿ ನಡೆಯಲಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆನ್ ಲೈನ್ ನೋಂದಣಿ ಆರಂಭವಾಗಿದೆ. ಏಪ್ರಿಲ್ 4ರಿಂದ ಏಪ್ರಿಲ್ 14ರವರೆಗೆ ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ.

ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಆನ್ ಲೈನ್ ನೋಂದಣಿ ಕಡ್ಡಾಯವಾಗಿದೆ. ಫೆ.16ರಿಂದಲೇ ಆನ್ ಲೈನ್ ನೋಂದಣಿ ಆರಂಭವಾಗಿದ್ದು, ಮಾರ್ಚ್ 20ರವರೆಗೆ ನೋಂದಣಿ ಮಾಡಬಹುದು. ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ದಿನಾಂಕದ ಪ್ರವೇಶ ಪತ್ರವನ್ನು ಮಾರ್ಚ್ 24ರಿಂದ ಮಾರ್ಚ್ 29ರೊಳಗೆ ಇ-ಮೇಲ್ ಮಾಡಲಾಗುತ್ತದೆ. ನಿಗದಿ ಪಡಿಸಿದ ದಿನವೇ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು.

ಈ ರ್ಯಾಲಿ 11 ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ನಡೆಯುತ್ತಿದೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಎಲ್ಲ ಅಭ್ಯರ್ಥಿಗಳಿಗೆ 17.6 ವರ್ಷದಿಂದ 23 ವರ್ಷ ವಯಸ್ಸಿನೊಳಗಿರಬೇಕು. ಕನಿಷ್ಠ 50  ಕೆ.ಜಿ. ತೂಕವಿರಬೇಕು.

ಹುದ್ದೆಗಳು ಯಾವುದು?

ಸೋಲ್ಜರ್ ಜನರಲ್– 10 ಪಾಸ್ (ಎಸ್ಸೆಸ್ಸೆಲ್ಸಿ)
ಸೋಲ್ಜರ್ ಟೆಕ್ನಿಕಲ್– ದ್ವಿತೀಯ ಪಿಯುಸಿ ಸೈನ್ಸ್ ಪಾಸ್
ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್– ದ್ವಿತೀಯ ಪಿಯುಸಿ ಸೈನ್ಸ್ ಪಾಸ್
ಕ್ಲರ್ಕ್, ಸ್ಟೋರ್ ಕೀಪರ್– ದ್ವಿತೀಯ ಪಿಯುಸಿ ಸೈನ್ಸ್ ಪಾಸ್
ಸೋಲ್ಜರ್ ಟ್ರೇಡ್ಸಮನ್– 8, 10 ಪಾಸ್

ನೋಂದಣಿ ಮಾಡಿಕೊಳ್ಳುವುದು ಹೇಗೆ?
ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್ ಸೈಟ್ www.joinindianarmy.nic.in. ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೂ ಮೊದಲು ಅಗತ್ಯ ದಾಖಲೆಗಳ ಮಾಹಿತಿ ಇಟ್ಟುಕೊಳ್ಳಬೇಕು. ಎಲ್ಲ ಮಾಹಿತಿಯನ್ನು ಕಡ್ಡಾಯವಾಗಿ ಎಸ್ಸೆಸ್ಸೆಲ್ಸಿ ಅಂಕ ಪಟ್ಟಿಯಲ್ಲಿ ಇರುವಂತೆಯೇ ಭರ್ತಿ ಮಾಡಬೇಕು.

ಪೂರ್ಣ ವಿವರ ತಿಳಿಯಲು ನೇಮಕಾತಿ ಆದೇಶ ಪ್ರತಿ ಓದಿ

Leave a reply

Your email address will not be published. Required fields are marked *